Asianet Suvarna News Asianet Suvarna News

ದೇವದುರ್ಗ: ಲಾಕ್‌ಡೌನ್‌ನಲ್ಲಿ ಶಿವನಗೌಡರಿಂದ ನಿತ್ಯ 40 ಸಾವಿರ ಜನರಿಗೆ ಊಟದ ವ್ಯವಸ್ಥೆ

* ತಿಂಗಳ ಕಾಲ ನಿರಂತರವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ
* ಊಟದ ಜೊತೆಗೆ ಮಾಸ್ಕ್, ಮೊಟ್ಟೆ ಹಾಗೂ ಅರ್ಧ ಲೀಟರ್ ನೀರು ವಿತರಣೆ 
* ಕ್ಷೇತ್ರದ 300 ಹಳ್ಳಿಗಳು, 300 ದೊಡ್ಡಿ ಮತ್ತು ತಾಂಡಾಗಳಿಗೆ ಮಧ್ಯಾಹ್ನದ ಊಟ
 

MLA K Shivagouda Nayak Provide Food to Needy in Devadurga During Lockdown grg
Author
Bengaluru, First Published Jun 2, 2021, 2:01 PM IST

ರಾಯಚೂರು(ಜೂ.02): ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಲಾಕ್‌ಡೌನ್‌ನಡುವೆ ಜನರು ಪೌಷ್ಟಿಕ ಆಹಾರ ಕೊರತೆಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಅವರು ಕ್ಷೇತ್ರದ 300 ಹಳ್ಳಿಗಳು, 300 ದೊಡ್ಡಿ ಮತ್ತು ತಾಂಡಾಗಳಿಗೆ ನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನ ಮಾಡಿದ್ದಾರೆ.     

ಲಾಕ್‌ಡೌನ್ ಮುಗಿಯುವರೆಗೂ ನಿತ್ಯ ಮಧ್ಯಾಹ್ನದ ಊಟ ಸರಬರಾಜು ಮಾಡಲು ನಿರ್ಧರಿಸಿದ್ದಾರೆ. ಪ್ರತಿದಿನ ಮಧ್ಯಾಹ್ನ 40 ಸಾವಿರ ಜನರಿಗೆ ಊಟ ಸರಬರಾಜು ಆಗಲಿದೆ. ಊಟದ ಜೊತೆಗೆ ಮಾಸ್ಕ್, ಮೊಟ್ಟೆ ಹಾಗೂ ಅರ್ಧ ಲೀಟರ್ ನೀರು ಕೂಡ ಸರಬರಾಜು ಮಾಡಲಿದ್ದಾರೆ.

ರಾಯಚೂರಲ್ಲಿ ಹೆಸರಿಗೆ ಸೀಮಿತ ಕಠಿಣ ಲಾಕ್‌ಡೌನ್‌

ಒಂದು ತಿಂಗಳ ಕಾಲ ನಿರಂತರವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನ ಮಾಡುವ ಪ್ಲಾನ್ ಇದಾಗಿದೆ. ಅದರಂತೆ ನಿತ್ಯವೂ ಊಟ ಕೊಡುವ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಹೀಗಾಗಿ ನಿರಂತರವಾಗಿ ಬಡ ಜನರಿಗೆ ಊಟ ಸರಬರಾಜು ಮಾಡುತ್ತಿದ್ದೇವೆ ಎಂದ ಶಾಸಕ ಕೆ. ಶಿವನಗೌಡ ನಾಯಕ ಹೇಳಿದ್ದಾರೆ. 
 

Follow Us:
Download App:
  • android
  • ios