'ಮೋದಿ ಟೀಕಿಸಲು ಎಚ್.ಕೆ. ಪಾಟೀಲ್‌ಗೆ ಹಕ್ಕಿಲ್ಲ'
ಎಚ್.ಕೆ.ಪಾಟೀಲ್ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ಪಡೆದು ಪೋಸ್ ನೀಡಿದ್ದು ಸರಿಯೇ?| ಮೋದಿ ವಿರುದ್ಧ ಟೀಕೆ ಮಾಡಿ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಮನಸ್ಸು ಗೆಲ್ಲಲು ಮುಂದಾಗಿರುವ ಶಾಸಕರಿಗೆ ಗದಗ ಜನತೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅನಿಲ ಮೆಣಸಿನಕಾಯಿ|
ಗದಗ(ಮಾ.03): ಪಾರದರ್ಶಕ ಮತ್ತು ಜನಪರ ಆಡಳಿತದಿಂದಾಗಿ ವಿಶ್ವದ ಗೌರವಕ್ಕೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ನೈತಿಕತೆ ಶಾಸಕ ಎಚ್.ಕೆ. ಪಾಟೀಲಗಿಲ್ಲ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗಡ್ಡ ಬಿಟ್ಟರೆ ರವೀಂದ್ರನಾಥ ಠಾಗೋರ್ ಆಗಲ್ಲ, ಮಿಲಿಟರಿ ಬಟ್ಟೆ ತೊಟ್ಟರೆ ಶುಭಾಸಚಂದ್ರ ಭೋಸ್ ಆಗಲ್ಲ ಎನ್ನುವ ಮೂಲಕ ಸಂವಿಧಾನಿಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಿ ಅವರನ್ನು ಶಾಸಕ ಎಚ್.ಕೆ.ಪಾಟೀಲ್ ಟೀಕಿಸಿದ್ದರು.
ಗದಗ: ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವ..!
ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಎಚ್.ಕೆ.ಪಾಟೀಲ್ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ಪಡೆದು ಪೋಸ್ ನೀಡಿದ್ದು ಸರಿಯೇ? ಮೋದಿ ಅವರ ವಿರುದ್ಧ ಟೀಕೆ ಮಾಡಿ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಮನಸ್ಸು ಗೆಲ್ಲಲು ಮುಂದಾಗಿರುವ ಶಾಸಕರಿಗೆ ಗದಗ ಜನತೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.