ಹೇಳಲು ಮಲೆನಾಡು, ರಸ್ತೇಲಿ ಎರಡು ಮರ ಕಾಣಿಸ್ತಿಲ್ಲ.. ಏನ್ ಕರ್ಮ ನಮ್ದು..!

ಚಿಕ್ಕಮಗಳೂರು ಹೇಳಿಕೊಳ್ಳೋದಕ್ಕೆ ಮಲೆನಾಡು ಎಂದು ಖ್ಯಾತಿಯಾಗಿದೆ. ಹೇಳಿಕೊಳ್ಳಲು ಮಲೆನಾಡು ಆಗಿದ್ದರೂ ರಸ್ತೆಯ ಎರಡೂ ಬದಿಯಲ್ಲಿ ನೋಡಿದರೂ ಒಂದೆರಡು ಮರಗಳು ಕೂಡ ಕಾಣಿಸುತ್ತಿಲ್ಲ.

MLA HD Thammaiah inaugurated Environment Day program organized in Chikkamagaluru sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.05): ಚಿಕ್ಕಮಗಳೂರು ಹೇಳಿಕೊಳ್ಳೋದಕ್ಕೆ ಮಲೆನಾಡು ಎಂದು ಖ್ಯಾತಿಯಾಗಿದೆ. ಹೇಳಿಕೊಳ್ಳಲು ಮಲೆನಾಡು ಆಗಿದ್ದರೂ ರಸ್ತೆಯ ಎರಡೂ ಬದಿಯಲ್ಲಿ ನೋಡಿದರೂ ಒಂದೆರಡು ಮರಗಳು ಕೂಡ ಕಾಣಿಸುತ್ತಿಲ್ಲ ಏನ್ ಕರ್ಮನೋ ನಮ್ದು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ದ ಶಾಸಕ ಹೆಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಹಾಗು ಇಂಜಿನಿಯರ್‌ಗಳ ವಿರದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಡವಾಗಿ ಹಾಜರಾಗಿದ್ದೇ ಆದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ವೀಕ್ಷಣೆ ಮಾಡಿದ ಅವರು, ಹೇಳಿಕೊಳ್ಳಲು ಮಲೆನಾಡು ಆಗಿದ್ದರೂ ರಸ್ತೆಯಲ್ಲಿ ಎರಡು ಮರಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವಂತೆ ಸ್ಥಳೀಯ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Gruha Jyothi- ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಜುಲೈನಿಂದ ಜಾರಿ: ಗೃಹಜ್ಯೋತಿಗೆ 10 ಷರತ್ತುಗಳು

ಚಿಕ್ಕಮಗಳೂರು ನಗರದ ಎ.ಐ.ಟಿ.ವೃತ್ತದಲ್ಲಿ ಪರಿಸರ ದಿನಾಚರಣೆಯ  ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಗೈರು ಹಾಜರಿ ಬಗ್ಗೆ ಸಿಡಿಮಿಡಿಗೊಂಡ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ನಗರಸಭೆಯ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡು ತಪ್ಪು ಒಮ್ಮೆ ಕ್ಷಮಿಸಬಹುದು ಪದೇ ಪದೇ ಜರುಗಿಸಿದರೆ ಶಿಷ್ಟಾಚಾರ ಉಲ್ಲಂಘನೆಯಾದಂತೆ ಆ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು. ಇದೇ ವೇಳೆ ನಗರಸಭಾ ಅಧ್ಯಕ್ಷರಿಗೆ ಗಮನಕ್ಕೂ ತಂದು ಮುಂದಿನ ದಿನಗಳಲ್ಲಿ ಸರ್ಕಾರದ ಕಾರ್ಯಕ್ರಮ ಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಸಮಯಕ್ಕೆ ಬಾರದಿರುವುದು ಹಾಗೂ ಗೈರಾಗುವ ಕೆಲಸ ಮಾಡಿದರೆ ಕಾನೂನುರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸ್ವಚ್ಚಂಧ ಗಾಳಿಯಿಂದ ಆರೋಗ್ಯವಾಗಿ ಜೀವಿಸಲು ಸಾಧ್ಯ: ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಪರಿಸರಕ್ಕೆ ಪೂರಕವಾಗಿರುವ ಅರಳಿ, ಹೊಂಗೆ ಹಾಗೂ ನೇರಳೆ ತಳಿಗಳನ್ನೊ ಳಗೊಂಡ ಸಸಿಗಳನ್ನು ನಗರ ಸೇರಿದಂತೆ ಜಿಲ್ಲೆಯ ವಿವಿದೆಡೆ ಅತಿಹೆಚ್ಚು ನೆಡುವುದರಿಂದ ಜೀವಸಂಕುಲಕ್ಕೆ ಸ್ವಚ್ಚಂಧ ಗಾಳಿ ಲಭಿಸುವ ಮೂಲಕ ಆರೋಗ್ಯದಿಂದ ಜೀವಿಸಲು ಸಾಧ್ಯ. ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಲೆನಾಡು ಅತಿಹೆಚ್ಚು ಮಳೆ ಬೀಳುವ ಪ್ರದೇಶ ಹಾಗೂ ಹಚ್ಚಹಸಿರಿನಿಂದ ಕೂಡಿರುವ ತಾಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವವಿರುವುದರಿಂದ ಅರಣ್ಯ ಇಲಾಖೆ ಅತಿಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ವನ್ನು ಈ ತಿಂಗಳಲ್ಲೇ ರೂಪಿಸಿದರೆ ಜುಲೈನಲ್ಲಿ ಆರಂಭವಾಗುವ ಮಳೆಗಾಲಕ್ಕೆ ಸಸಿಗಳ ಬೆಳವಣಿಗೆಗೆ ಸಹಕಾರಿ ಯಾಗಲಿದೆ ಎಂದರು. ಪ್ರಕೃತಿ ಮಾನವನಿಗೆ ದೊರೆತ ಅತ್ಯಮೂಲ್ಯ ಸಂಪತ್ತು. ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು   ಮುಂದಿನ ಪೀಳಿಗೆಗಾಗಿ ಪರಿಸರ ಉಳಿವಿಗೆ ಕೈಜೋಡಿಸಬೇಕು ಎಂದು ಹೇಳಿದರು. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪಲ್ಟಿಯಾಗಿ 100 ಮೀಟರ್‌ ಉರುಳಿದ ಕಾರು

ಮಳೆನೀರು ಕೊಯ್ಲು , ಸೋಲಾರ್ ಅಳವಡಿಸಬೇಕು: ನಗರ ಸಮೀಪದಲ್ಲಿ ನೂತನವಾಗಿ ಮನೆ ನಿರ್ಮಿಸುವವರಿಗೆ ಕಡ್ಡಾಯವಾಗಿ ಗಿಡ ಬೆಳೆಸಬೇಕು. ಮಳೆನೀರು ಕೊಯ್ಲು ಹಾಗೂ ಸೋಲಾರ್ ಅಳವಡಿಸಬೇಕು ಎಂದು ಕಾನೂನು ರೂಪಿಸಿದರೆ ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಸಂರಕ್ಷಿಸಲು ಮುಂದಾಗದಿದ್ದ ಪಕ್ಷದಲ್ಲಿ ಆಮ್ಲಜನಕವನ್ನು ಹಣಕೊಟ್ಟು ಖರೀದಿಸುವ ಸಂಭವಿರುವಿದೆ. ಆ ನಿಟ್ಟಿನಲ್ಲಿ ಸಮಾಜದ ನಾಗರೀಕರು ಈಗಿನಿಂದಲೇ ಎಚ್ಚೆತ್ತುಕೊಂಡು ಸಸಿಗಳನ್ನು ನೆಡುವ ಪದ್ಧತಿ ರೂಢಿಸಿಕೊಂಡರೆ ಮುಂದಿನ ಪೀಳಿಗೆಗೆ ಪರಿಸರವನ್ನು ಕೊಂಡೊಯ್ಯವ ಸಾಧ್ಯ ಎಂದು ಸಲಹೆ ಮಾಡಿದರು. 

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ , ಸದಸ್ಯರಾದ ಸಿ.ಪಿ.ಲಕ್ಷ್ಮಣ್, ಇಂದಿರಾಶಂಕರ್ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios