ಬೆಂಗಳೂರು (ಸೆ.17): ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದ ವೇಳೆಯೇ ಬೆಂಗಳೂರಿನ ಶಾಂತಿನಗರ ಕಾಂಗ್ರೆಸ್‌ ಶಾಸಕ ಎನ್‌. ಹ್ಯಾರಿಸ್‌ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

 ಮಂಗಳವಾರ ಸೋಂಕು ಪರೀಕ್ಷೆಗೆ ನೀಡಿದ್ದ ಹ್ಯಾರಿಸ್‌ ಸಭೆಗೆ ಹಾಜರಿದ್ದರು. ಸಭೆಯಲ್ಲಿದಾಗಲೇ ಕೊರೋನಾ ಪಾಸಿಟಿವ್‌ ಬಂದಿರುವುದಾಗಿ ಶಾಸಕರ ಮೊಬೈಲ್‌ಗೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸಭೆಯಿಂದ ಹೊರ ನಡೆದರು ಎಂದು ತಿಳಿದುಬಂದಿದೆ.

ರಾಜಧಾನಿಯಲ್ಲಿ ಹೆಚ್ಚಿದ ಸೋಂಕು

ರಾಜಧಾನಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬರೋಬ್ಬರಿ ಎರಡೂವರೆ ಸಾವಿರ ದಾಟಿದೆ.

ಕೊರೋನಾ ಸೋಂಕಿತರ ಚಿಕಿತ್ಸೆ: ಬೆಡ್‌ ಹಸ್ತಾಂತರಿಸದ ಆಸ್ಪತ್ರೆಗಳಿಗೆ ಬಿಬಿಎಂಪಿ ಚಾಟಿ .

ನಗರದಲ್ಲಿ ಇದುವರೆಗೂ ಈವರೆಗೆ ಒಟ್ಟು 12,64,759 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 1.76 ಲಕ್ಷ ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಪರೀಕ್ಷೆಗೆ ಒಳಗಾಗುತ್ತಿರುವ 100 ಮಂದಿಯಲ್ಲಿ 13 ರಿಂದ 14 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅವರಲ್ಲಿ ಗರಿಷ್ಠ ಇಬ್ಬರು ಮೃತಪಡುತ್ತಿದ್ದಾರೆ.

'ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ : ಇದ್ರ ಹಿಂದೆ ಇರೋರೆ ಬೇರೆ' .

ಮಂಗಳವಾರ ಸೋಂಕಿನಿಂದ 41 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 2,514ಕ್ಕೆ ಏರಿಕೆಯಾಗಿದೆ. 3,084 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,889 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಗುಣಮುಖ ಆದವರ ಸಂಖ್ಯೆ 1,34,516ಕ್ಕೆ ತಲುಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 39,681ಕ್ಕೆ ಏರಿಕೆ ಆಗಿದೆ. 263 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.