Asianet Suvarna News Asianet Suvarna News

ಕೊರೋನಾ ಸೋಂಕಿತರ ಚಿಕಿತ್ಸೆ: ಬೆಡ್‌ ಹಸ್ತಾಂತರಿಸದ ಆಸ್ಪತ್ರೆಗಳಿಗೆ ಬಿಬಿಎಂಪಿ ಚಾಟಿ

ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಹಹಾರ ನೀಡದ, ಸರ್ಕಾರಕ್ಕೆ ಶೇ.50 ರಷ್ಟು ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌| ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು| 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್‌ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚನೆ| 

BBMP Notice Issued to 36 Private Hospitals in Bengalurugg
Author
Bengaluru, First Published Sep 17, 2020, 8:14 AM IST

ಬೆಂಗಳೂರು(ಸೆ.17): ನಗರದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡದ ಮತ್ತು ಸರ್ಕಾರದ ಆದೇಶದಂತೆ ಆಸ್ಪತ್ರೆಯ ಒಟ್ಟು ಹಾಸಿಗೆಯಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದ ವಶಕ್ಕೆ ನೀಡದ ನಗರದ 36 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಜತೆಗೆ ಮುಂದಿನ 48 ಗಂಟೆಗಳ ಒಳಗಾಗಿ ಸರ್ಕಾರದ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಬೇಕು ಹಾಗೂ 24 ಗಂಟೆಗಳ ಒಳಗಾಗಿ ಪಾಲಿಕೆಯ ಶೋಕಾಸ್‌ ನೋಟಿಸ್‌ಗೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿಗಳಿಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ನೋಟಿಸ್‌ಗೆ ಉತ್ತರ ನೀಡದೆ ಹಾಗೂ ಸರ್ಕಾರದ ನಿರ್ದೇಶನದಂತೆ ಶೇ.50 ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡದೆ ಇದ್ದಲ್ಲಿ, ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡುವುದರ ಜತೆಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೋಂಕಿತರ ಚಿಕಿತ್ಸೆಗೆ ಆನ್‌ಲೈನ್‌ ಪೋರ್ಟ್‌ನಲ್ಲಿ ಹಾಸಿಗೆ ಬ್ಲಾಕ್‌ ಮಾಡಿದರೂ, ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗುತ್ತಿತ್ತು. ಅಲ್ಲದೆ, ಎಸ್‌ಎಎಸ್‌ಟಿ ಪೋರ್ಟ್‌ನಲ್ಲಿ ವಿವರವಾದ ಮಾಹಿತಿ ನೀಡಿಲ್ಲ ಎಂದು ನೋಟಿಸ್‌ ನೀಡಲಾಗಿದೆ.

ಕರ್ನಾಟಕದಲ್ಲಿ ಬುಧವಾರ ಕೊರೋನಾ ಮಹಾಸ್ಪೋಟ: ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ

ಈಗಾಗಲೇ ಹಲವು ಬಾರಿ ಬಿಬಿಎಂಪಿ ಆಯುಕ್ತರು ಮತ್ತು ಅಧಿಕಾರಿಗಳು ಸರ್ಕಾರಿ ಆದೇಶದಂತೆ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದ ವಶಕ್ಕೆ ನೀಡುವಂತೆ ಸೂಚನೆ ನೀಡಲಾಗಿತ್ತು. ಹಲವು ಬಾರಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಬಿಬಿಎಂಪಿಯಿಂದ ಸಾಧ್ಯವಾಗುವ ಎಲ್ಲ ಸಹಕಾರ ನೀಡಲಾಗುವುದು. ಶೇ.50ರಷ್ಟುಹಾಸಿಗೆ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳು ಶೇ.50ರಷ್ಟುಹಾಸಿಗೆ ನೀಡಿರಲಿಲ್ಲ. ಹೀಗಾಗಿ, ಬಿಬಿಎಂಪಿ ಆಯುಕ್ತರು ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಆಸ್ಪತ್ರೆಗಳ ವಿವರ

100 ಹಾಸಿಗೆಗಿಂತ ಹೆಚ್ಚಿರುವ 21 ಆಸ್ಪತ್ರೆ:

ಶೇಷಾದ್ರಿಪುರ ಮತ್ತು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆ, ಬ್ಯಾಪ್ಟಿಸ್ಟ್‌, ಕ್ರಿಸ್ಟ್‌ ಸೂಪರ್‌, ಎಚ್‌ಬಿಎಸ್‌ ಆಸ್ಪತ್ರೆ, ಮೆಡಿಒಪ್‌ ಆಸ್ಪತ್ರೆ, ನಂದನಾ ಹೆಲ್ತ್‌ಕೇರ್‌ ಸರ್ವಿಸ್‌, ನಾರಾಯಣ ಹೃದಯಾಲಯ, ನ್ಯೂಜನಪ್ರಿಯ ಸೂಪರ್‌ ಸ್ಪೆಷಾಲಿಟಿ, ಸಂತೋಷ್‌ ಆಸ್ಪತ್ರೆ, ಶಿಫಾ, ಎಸ್‌ಐ ವೇಗ ಆಸ್ಪತ್ರೆ, ಸ್ಪೆಷಲಿಸ್ಟ್‌ ಹೆಲ್ತ್‌ ಸಿಸ್ಟಮ್‌ ಪ್ರೈ. ಲಿ. ಬಿಜಿಎಸ್‌ ಗ್ಲೋಬಲ್‌, ಸಾಗರ್‌, ಸಂತೋಷ್‌, ಮಣಿಪಾಲ್‌, ವಿಕ್ರಂ, ಸಾಕ್ರಾ, ಪಲ್ಸ್‌, ಸಿಟಿ ಆಸ್ಪತ್ರೆ.

50-100 ಹಾಸಿಗೆ ಇರುವ 10 ಆಸ್ಪತ್ರೆ:

ರಾಮಯ್ಯ ಹರ್ಷ ಆಸ್ಪತ್ರೆ, ಹೆಲ್ತ್‌ಕೇರ್‌ ಗ್ಲೋಬಲ್‌ ಎಂಟರ್‌ಪ್ರೈ, ರಕ್ಷಾ ಮಲ್ಟಿಸ್ಪೆಷಲ್‌ ಆಸ್ಪತ್ರೆ, ವಿಜಯ ಶ್ರೀ, ಇಹಾ ಆಸ್ಪತ್ರೆ, ಯಲಹಂಕದ ಶೂಶ್ರೂಷಾ ಆಸ್ಪತ್ರೆ, ನ್ಯೂಆಸ್ಪತ್ರೆ, ಕಂಫರ್ಟ್‌ ಮಲ್ಟಿಸ್ಪೆಷಲ್‌ ಆಸ್ಪತ್ರೆ, ಶ್ರೀನಿವಾಸ ಮಲ್ಟಿಕ್ಯಾನ್ಸರ್‌ ಆಸ್ಪತ್ರೆ, ರಿಪಬ್ಲಿಕ್‌ ಆಸ್ಪತ್ರೆ.

25-50 ಹಾಸಿಗೆ ಇರುವ 5 ಆಸ್ಪತ್ರೆಗಳು:

ನಾಗರಬಾವಿ, ಬನ್ನೇರುಘಟ್ಟ ಹಾಗೂ ರಾಜಾಜಿನಗರದ ಫೋರ್ಟಿಸ್‌ ಆಸ್ಪತ್ರೆ, ಪಿಎಂ ಸಂತೋಷ್‌ ಹಾಗೂ ಅಪೂರ್ವ ಡಯಾಗ್ನೋಸ್ಟಿಕ್‌.
 

Follow Us:
Download App:
  • android
  • ios