ಉಡುಪಿ: ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಮುನ್ನೆಚ್ಚರಿಕಾ ಭೇಟಿ
ನೆರೆ ಹಾವಳಿಯಿಂದಾಗುವ ಆವಂತರಗಳ ಬಗ್ಗೆ ಜನರೊಂದಿಗೆ ಚರ್ಚೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ ಶಾಸಕರಾದ ಗುರುರಾಜ ಗಂಟಿಹೊಳೆ
ಉಡುಪಿ(ಜೂ.13): ಬೈಂದೂರು ತಾಲೂಕಿನ ಸೌಪರ್ಣಿಕ ನದಿ ಸಮೀಪದಲ್ಲಿರುವ ಊರುಗಳಾದ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ, ಹೇರೂರು, ಮುಂತಾದ ಪ್ರದೇಶಗಳು ಪ್ರತಿ ವರ್ಷ ಮಳೆಗಾಲ ಬಂದರೆ ಇಲ್ಲಿನ ಜನರಿಗೆ ನೆರೆಯ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ರಸ್ತೆ ಸಂಪರ್ಕವಿಲ್ಲದೆ ದೋಣಿ ಮೂಲಕವೇ ಮೂಲಕವೇ ತಮ್ಮ ದೈನಂದಿನ ಚಟುವಟಿಕೆಯನ್ನು ಸಾಗಿಸಬೇಕು. ಈ ಪರಿಸರದ ಜನರ ಸಂಕಷ್ಟ ಕೇಳಲು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಈ ಪರಿಸರದ ಜನರಿಗೆ ನೆರೆ ಬಂದರೆ ಹೆಚ್ಚು ಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು…ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗುತ್ತೆ. ಕುಡಿಯುವ ನೀರಿಗೂ ಸಮಸ್ಯೆ ಆಗುತ್ತೆ. ನೆರೆ ನೀರು ಜೊತೆ ಕೆಲವೊಂದು ಹಾವುಗಳು ಮನೆ ಒಳಗೆ ನುಗ್ಗುವ ಭೀತಿ ಉಂಟಾಗುತ್ತದೆ.
ಒಡಿಶಾ ರೈಲು ದುರಂತದಲ್ಲಿ ಪಾರಾದವರು ಕಾರ್ಕಳಕ್ಕೆ ವಾಪಸ್..!
ನೆರಪೀಡಿತ ಪ್ರದೇಶವಾದ ಸಾಲ್ಬುಡ, ಕಂಡಿಕೇರಿ, ಕುದ್ರುಭಾಗಗಳಿಗೆ ಶಾಸಕರಾದ ಗುರುರಾಜ ಗಂಟಿಹೊಳೆ ಭೇಟಿ ನೀಡಿ ಮಾತನಾಡಿದರು. ನೆರೆ ಹಾವಳಿಯಿಂದಾಗುವ ಆವಂತರಗಳ ಬಗ್ಗೆ ಜನರೊಂದಿಗೆ ಚರ್ಚೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಮಹೇಂದ್ರ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಪೂಜಾರಿ,ಮಂಜುನಾಥ್ ಕಾರಂತ್ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.