BJPಗೆ ಓಟ್ ಮಾಡಿದ್ರೆ FIR, ಎಸ್ಪಿ ವಿರುದ್ಧ ಶಾಸಕ ಗೂಳಿಹಟ್ಟಿ ಗುಟುರು
ಬಿಜೆಪಿಗೆ ಮತ ಹಾಕಿದ್ರೆ ಪೊಲೀಸ್ ಇಲಾಖೆಯಿಂದ ಉಚಿತ ಎಫ್‌ಐಆರ್ , ಜೈಲು ಶಿಕ್ಷೆ ಗ್ಯಾರಂಟಿ. ಹೊಸದುರ್ಗ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಶಾಸಕ ಗೂಳಿಹಟ್ಟಿಶೇಖರ್ ಸ್ವತಹ ಇಂತಹದ್ದೊಂದು ಹೇಳಿಕೆಯ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಜಿಲ್ಲಾ ರಕ್ಷಣಾಧಿಕಾರಿ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗೂಳಿಹಟ್ಟಿಶೇಖರ್ ಅವರ ಈ ಟ್ವೀಟ್ ವೈರಲ್ ಆಗಿದ್ದು ಎಲ್ಲ ಕಡೆ ಹರಿದಾಡುತ್ತಿದೆ.
ಚಿತ್ರದುರ್ಗ(ಏ.05): ಬಿಜೆಪಿಗೆ ಮತ ಹಾಕಿದ್ರೆ ಪೊಲೀಸ್ ಇಲಾಖೆಯಿಂದ ಉಚಿತ ಎಫ್‌ಐಆರ್ , ಜೈಲು ಶಿಕ್ಷೆ ಗ್ಯಾರಂಟಿ. ಹೊಸದುರ್ಗ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಶಾಸಕ ಗೂಳಿಹಟ್ಟಿಶೇಖರ್ ಸ್ವತಹ ಇಂತಹದ್ದೊಂದು ಹೇಳಿಕೆಯ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಜಿಲ್ಲಾ ರಕ್ಷಣಾಧಿಕಾರಿ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗೂಳಿಹಟ್ಟಿಶೇಖರ್ ಅವರ ಈ ಟ್ವೀಟ್ ವೈರಲ್ ಆಗಿದ್ದು ಎಲ್ಲ ಕಡೆ ಹರಿದಾಡುತ್ತಿದೆ.
ಇತ್ತೀಚಿಗೆ ಬಿಜೆಪಿ ಕಾರ್ಯಕರ್ತನೊಬ್ಬ ತಮ್ಮ ಮನೆ ಕೆಲಸಕ್ಕಾಗಿ ಅಕ್ರಮವಾಗಿ ಮರಳು ತುಂಬಿಕೊಂಡು ಹೊಗುತ್ತಿದ್ದಾಗ ಚಿತ್ರದುರ್ಗದಿಂದ ಬಂದ ಜಾಗೃತದಳದ ಪೊಲೀಸ್ ಅಧಿಕಾರಿಯೊಬ್ಬರು ಮರಳು ತುಂಬಿಕೊಂಡು ಹೊಗುತ್ತಿದ್ದವರ ಮೇಲೆ ಎಫ್‌ಐಆರ್ ಹಾಕಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಹೊಸದುರ್ಗದ ಹಿಂದಿನ ಸರ್ಕಲ್ ಇನ್ ಸ್ಪೆಕ್ಟರ್ ವೊಬ್ಬರು ಡಿಸಿಐಬಿಯಲ್ಲಿ ಕುಳಿತುಕೊಂಡು ಈ ಕೆಲಸ ಮಾಡುತ್ತಿದ್ದಾರೆಂಬುದು ಗೂಳಿಹಟ್ಟಿಶೇಖರ್ ಆರೋಪ.
ಲಾಕ್‌ಡೌನ್‌ನಿಂದಾಗಿ ಅತಂತ್ರವಾಗಿ ಕುಳಿತಿವೆ ಅಲೆಮಾರಿ ಕುಟುಂಬಗಳು
ತಾವು ಶಾಸಕರಾಗಿ ಆಯ್ಕೆಯಾದ ನಂತರ ಹೊಸದುರ್ಗದ ಸರ್ಕಲ್ ಇನ್ ಸ್ಪೆಕ್ಟರ್ ವರ್ಗಾವಣೆಗೊಂಡು ಅವರ ಜಾಗಕ್ಕೆ ಬೇರೊಬ್ಬರು ಬಂದಿದ್ದರು. ಈ ಸಿಪಿಐ ಮಾಜಿ ಶಾಸಕರ ಅಣತಿಯಲ್ಲಿ ಈಗಲೂ ಕೆಲಸ ಮಾಡುತ್ತಿದ್ದಾರೆ. ವರ್ಗಾವಣೆಗೊಂಡ ನಂತರ ಎಸ್ಪಿ ಕಚೇರಿಯಲ್ಲೇ ಡಿಸಿಐಬಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ವಿಶೇಷ ದಳದ ಹೆಸರಲ್ಲಿ ಪದೇ ಪದೆ ಹೊಸದುರ್ಗಕ್ಕೆ ಬಂದು ದಾಳಿ ನಡೆಸುತ್ತಿದ್ದಾರೆ. ಹಾಲಿ ಇರುವ ಅಧಿಕಾರಿಗಳ ಅಧೀರರನ್ನಾಗಿ ಮಾಡುತ್ತಿದ್ದಾರೆ. ಎಸ್ಪಿಯವರು ಇಂತಹವರ ಮೇಲೆ ಸರಿಯಾಗಿ ನಿಗಾವಹಿಸಿಲ್ಲವೆಂಬುದು ಗೂಳಿಹಟ್ಟಿಶೇಖರ್ ದೂರು.
ಡಿಸಿಐಬಿ ಅಧಿಕಾರಿಗಳ ನಡವಳಿಕೆಗೆ ಸಂಬಂಧಿಸಿದಂತೆ ಆಡಿಯೋವೊಂದನ್ನು ಗೂಳಿಹಟ್ಟಿಶೇಖರ್ ಸಾಮಾಜಿಕ ಜಾಲ ತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ. ಹೊಸದುರ್ಗ ತಾಲೂಕಿನ ಗ್ಯಾಂಬ್ಲರ್ ಸಂಗಡ ಅಧಿಕಾರಿ ಮಾತನಾಡಿದ ಆಡಿಯೋ ಇದಾಗಿದೆ.
ಚಿತ್ರದುರ್ಗದ ಡಿಸಿಐಬಿ ಇನ್‌ಸ್ಪೆಕ್ಟರ್ ಆಗಿರುವ ರುದ್ರಪ್ಪ ಕಳೆದ ವರ್ಷ ಹೊಸದುರ್ಗದ ಸಿಪಿಐ ಅಗಿದ್ದರು. ಅವರು ತಾಲೂಕಿನ ಗ್ಯಾಂಬ್ಲರ್ ರೊಬ್ಬರ ಬಳಿ ಮಾತನಾಡಿರುವ ಆಡಿಯೋ ಪೊಲೀಸರ ನಡವಳಿಕೆ ಆಕ್ಷೇಪಿಸುವಂತಿದೆ.
ಎಸ್‌ಪಿ ಮೇಡಂ ತಾಲೂಕಿನ ನಿಯಂತ್ರಣಕ್ಕೆ 2 ಟೀಂ ಮಾಡಿದ್ದಾರೆ. ಅದರಲ್ಲಿ ನಾನೂ ಇದ್ದೇನೆ. ಯಾವಾಗ ಎಲ್ಲಿ ಬೇಕಾದರೂ ನಾವು ರೈಡ್ ಮಾಡಬಹುದಾಗಿದ್ದು ತಾಲೂಕು ಸಂಪೂರ್ಣ ನಮ್ಮ ಕಣ್ಗಾವಲಿನಲ್ಲಿದೆ ಎಂದು ಡಿಸಿಐಬಿ ಅಧಿಕಾರಿ ರುದ್ರಪ್ಪ ಹೇಳಿರುವುದು ಶಾಸಕರ ಕೋಪಕ್ಕೆ ಕಾರಣವಾಗಿದೆ.
ಬಡವರ ತುತ್ತಿನ ಚಿಲಕ್ಕೂ ಕೊರೋನಾ ಕಾಟ: ಊಟ ಸಿಗದೆ ಅಲೆಮಾರಿಗಳ ಪರದಾಟ!
ದೇಶದಾದ್ಯಂತ ಕೊರೋನಾ ವೈರಸ್ ಹೊತ್ತಿ ಉರಿಯುತ್ತಿದೆ ಇಂತಹ ಸಂದರ್ಭದಲ್ಲಿ ಕೂಲಿ ಕಾರ್ಮಿಕನೊರ್ವ ತಮ್ಮ ಕೆಲಸಕ್ಕಾಗಿ ಮರಳು ತುಂಬಿಕೊಂಡು ಹೋಗುತ್ತಿದ್ದರೆ ನಮ್ಮ ಕಡೆಯವನೆಂದು ದೂರು ದಾಖಲಿಸಲಾಗುತ್ತಿದೆ. ಮಾಜಿ ಶಾಸಕರು ಹೇಳಿದರು ಎನ್ನುವ ಕಾರಣಕ್ಕೆ ಎಸ್‌ಪಿ ಮೇಡಂ ಚಿತ್ರದುರ್ಗದಿಂದ ಅಧಿಕಾರಿಗಳನ್ನು ಕಳಿಸಿ ಕೇಸು ದಾಖಲಿಸುತ್ತಿದ್ದಾರೆ ಇದರ ಅವಶ್ಯಕತೆ ಇತ್ತ? ಎಂದು ಗೂಳಿಹಟ್ಟಿಶೇಖರ್ ಪ್ರಶ್ನಿಸಿದ್ದಾರೆ.