ಮತ್ತೋರ್ವ ಬಿಜೆಪಿ ಶಾಸಕಗೆ ಕೊರೋನಾ ಪಾಸಿಟಿವ್ : ಸಂಪರ್ಕಕ್ಕೆ ಬರದಿರಲು ಮನವಿ
ರಾಜ್ಯದ ಮತ್ತೋರ್ವ ಬಿಜೆಪಿ ಶಾಸಕಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಚಿತ್ರದುರ್ಗ (ಅ.09): ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಕೊರೋನಾ ಸೋಂಕು ದೃಢವಾಗಿದೆ.
ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದ್ದು, ಈ ವೇಳೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಹೋಂ ಐಸೋಲೇಷನ್ ನಲ್ಲಿ ಶಾಸಕರು ರೆಸ್ಟ್ ಮಾಡುತ್ತಿದ್ದಾರೆ.
ಎಲ್ಲರೂ ಮಾಸ್ಕ್ ಬಳಸಿ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಗೂಳಿಹಟ್ಟಿ ಶೇಖರ್ ಜನರಲ್ಲಿ ಮನವಿ ಮಾಡಿದ್ದಾರೆ.
ಲಾಕ್‌ಡೌನ್‌ನಿಂದ ಉದ್ಯೋಗಕ್ಕೆ ಕತ್ತರಿ: ನಿರುದ್ಯೋಗದಿಂದ ಡ್ರಗ್ಸ್ ದಂಧೆಕೋರರ ಹೆಚ್ಚಳ! .
ಸ್ವಲ್ಪ ದಿನಗಳ ಕಾಲ ಯಾರೂ ಕಚೇರಿ ಹಾಗೂ ಮನೆಯ ಕಡೆ ಬರಬೇಡಿ. ಕಳೆದ ಒಂದು ವಾರದಿಂದ ನನ್ನ ಜೊತೆಗೆ ಸಂಪರ್ಕದಲ್ಲಿದ್ದವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.
ಅಲ್ಲದೇ ಯಾವುದೇ ತುರ್ತು ಅಗತ್ಯಗಳಿಲ್ಲದೇ ಯಾರೂ ಕೂಡ ಅನಾವಶ್ಯಕವಾಗಿ ವಿನಾಕಾರಣ ಅಡ್ಡಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.