ಉಡುಪಿ(ಆ.14): ಉತ್ತರ ಕರ್ನಾಟಕ ಹಾಗೂ ರಾಜ್ಯದಲ್ಲಿ ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಜೀವ ಹಾನಿ, ಮನೆ, ಆಸ್ತಿ ಪಾಸ್ತಿ, ಕೃಷಿ ಹಾನಿಗೊಳಗಾಗಿದ್ದರ ಪರಿಣಾಮ, ಸಾವಿರಾರು ಕೋಟಿ ರು. ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಸಮಾನ ಮನಸ್ಕರು ಒಟ್ಟುಗೂಡಿ ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಮುಂದಾಗಿದೆ.

ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಿ, ಅನಂತಶಯನದಿಂದ ಶ್ರೀ ಮೂಡು ಮಹಾಗಣಪತಿ ದೇವಸ್ಥಾನದ ತನಕ ಪಾದಯಾತ್ರೆ ನಡೆಸಿ, ಒಟ್ಟು 1, 55,785 ಲಕ್ಷ ರು. ಮತ್ತು 1 ಲಾರಿ ವಸ್ತು ರೂಪ ಪರಿಹಾರ ಸಂಗ್ರಹಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್‌ಎಸ್‌ಎಸ್‌ ಸಂಚಾಲಕ ಆರ್‌. ಸುರೇಂದ್ರ ಶೆಣೈ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌, ಪಕ್ಷದ ವಕ್ತಾರ ಕೆ.ಎಸ್‌. ಹರೀಶ್‌ ಶೆಣೈ, ರವಿ ಪ್ರಕಾಶ್‌, ಪಕ್ಷದ ವಿವಿಧ ಮುಖಂಡರು , ಪುರಸಭಾ ಸದಸ್ಯರು, ಮಾಜಿ ಪುರಸಭಾ ಸದಸ್ಯರು ಭಾಗವಹಿಸಿದ್ದರು.

ದೇವಳದ ಆನೆ ಇಂದಿರಾ ಇನ್ನಿಲ್ಲ, ಕೊಲ್ಲೂರು ಪೇಟೆ ಬಂದ್