ವಿಜಯಪುರ(ಡಿ.03):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಾಸ್‌ಬ್ರೀಡ್‌ ಹಿಂದೂ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕ್ರಾಸ್‌ಬ್ರೀಡ್‌ ಹಿಂದೂ  ಆಗಿದ್ದಾರೆ. ಇನ್ನು ಸೋನಿಯಾ ಹಾಗೂ ರಾಹುಲ್‌ ಗಾಂಧಿ ಪಾರ್ಟಿಗೆ ಸೇರಿ ಸಿದ್ದರಾಮಯ್ಯ ಕ್ರಾಸ್‌ಬ್ರೀಡ್‌ ಹಿಂದೂ ಆಗಿದ್ದಾರೆ. ಆದರೂ ಸಿದ್ದರಾಮಯ್ಯ ಒಳ್ಳೆಯ ನಾಯಕ ಎಂದಿದ್ದಾರೆ.

ನಾನು ಸಚಿವ ಸ್ಥಾನಕ್ಕಾಗಿ ಸಿಎಂ ಬಿಎಸ್ವೈ ಹಾಗೂ ಬಿ.ವೈ.ವಿಜಯೇಂದ್ರ ಮನೆಯ ಬಾಗಿಲಿಗೂ ಹೋಗುವುದಿಲ್ಲ. ಅಲ್ಲದೆ, ಯಾರಾರಯರು ಮಂತ್ರಿ ಹೇಗೆ ಆಗ್ತಾರೆ ಅನ್ನೋದು ನನಗೆ ಗೊತ್ತಿದೆ. ನಾನು ಯಾವತ್ತಿಗೂ ಡೌನ್ಆಗುವ ಮಗನಲ್ಲ. ಯತ್ನಾಳ ಯಾವತ್ತಿಗೂ ಗುಡುಗುತ್ತಾನೆ ಎಂದರು.

ಇದು ಕರವೇ ಅಲ್ಲ, ಕಳ್ಳರ ವೇದಿಕೆ: ಶಾಸಕ ಕೆಂಡಾಮಂಡಲ

ಇನ್ನೂ ದೆಹಲಿ ಜಾಮಿಯಾ ಮಸೀದಿ ಮೌಲಾನಾ ಹಿಂದೂಗಳಿಗೆ ಹೆಣ್ಣು ಸಿಗದಂತೆ ನೋಡಿಕೊಳ್ತೀನಿ ಎಂದಿದ್ದಾರೆ. ನಾವು ಕೂಡ ಅವರಿಗೆ ಹೆಣ್ಣು ಸಿಗದಂತೆ ನೋಡಿಕೊಳ್ತೀವಿ ಎಂದು ಕಿಡಿಕಾರಿದರು. ಇನ್ನೂ ಲವ್‌ ಜಿಹಾದ್‌ ಮಾಡೋರಿಗೆ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಜಾರಿಯಾದ ಕಾನೂನಿಗಿಂತಲೂ ನಮ್ಮ ರಾಜ್ಯದಲ್ಲಿ ಉತ್ತಮ ಕಾನೂನು ಜಾರಿಯಾಗಬೇಕು. ಅಲ್ಲಿನ ಮಾಹಿತಿ ಪಡೆಯಬೇಕಾಗಿದೆ. ಅಲ್ಲಿಗೆ ನಮ್ಮ ಸಚಿವರು ಅಧಿಕಾರಿಗಳನ್ನು ಕಳುಹಿಸಿ ಆ ಕಾನೂನು ಬಗ್ಗೆ ಮಾಹಿತಿ ಪಡೆಯಬೇಕು. ನಮ್ಮಲ್ಲೂ ಅದಕ್ಕೆ ಕಠಿಣ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಯತ್ನಾಳ ಹೊಸ ಬಾಂಬ್:

ಮುಖ್ಯಮಂತ್ರಿ ಪಿಎ ಸಂತೋಷ ಆತ್ಮಹತ್ಯೆಗೆ ಯತ್ನ ವಿಚಾರವಾಗಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ಸಿಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗಲಿ. ಆ ಮೇಲೆ ನಾನು ಮಾತನಾಡುವೆ. ಅದು ದೊಡ್ಡ ಕಥೆ ಇದೆ. ಕಾಲ ಬಂದಾಗ ನಾನೇ ಎಲ್ಲವನ್ನೂ ಹೇಳುವೆ ಎಂದು ಹೇಳಿದರು.