ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಂದ ಅಧಿಕಾರ ದುರ್ಬಳಕೆ

ಆಯುಕ್ತರು ಅಭಿಪ್ರಾಯದೊಂದಿಗೆ ನಿರ್ಣಯವನ್ನು ಮೇಯರ್‌ಗೆ ಸಲ್ಲಿಸಬೇಕು. ಕರ್ನಾಟಕ ಮುನ್ಸಿಪಲ್‌ ಕಾಯಿದೆ ಸೆಕ್ಷನ್‌ 166ರಿಂದ 172ರ ನಡುವೆ ಇಂತಹ ಹಲವಾರು ನಿಬಂಧನೆಗಳಿವೆ. ಆಯುಕ್ತರು ಮತ್ತು ಸಂಬಂಧಪಟ್ಟವರು ಅಧ್ಯಯನ ಮಾಡಬೇಕು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 3-4 ಬಾರಿ ಆಯ್ಕೆಯಾದ ಕೆಲ ಸದಸ್ಯರಿದ್ದಾರೆ. ನಾಲ್ವರು ಶಾಸಕರಿದ್ದಾರೆ. ಆದರೂ ತಪ್ಪು ಕ್ರಮ ಕೈಗೊಳ್ಳಲಾಗುತ್ತಿದೆ: ರಮೇಶ ಕುಡಚಿ 

Misuse of Power by Commissioner of Belagavi Municipal Corporation grg

ಬೆಳಗಾವಿ(ಮಾ.12): ಕಾನೂನಿನಡಿ ಅಧಿಕಾರ ಇಲ್ಲದಿದ್ದರೂ ಮಹಾನಗರ ಪಾಲಿಕೆ ಆಯುಕ್ತರು ಪಾಲಿಕೆ ಸಭೆಯನ್ನು ಹೇಗೆ ಕರೆದಿದ್ದಾರೆ? ಎಂದು ಮಾಜಿ ಶಾಸಕ ರಮೇಶ ಕುಡಚಿ ಪ್ರಶ್ನಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಮುನ್ಸಿಪಲ್‌ ಕಾಯಿದೆ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷರು ಅಥವಾ ಮೇಯರ್‌ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿದರು.

ಮೇಯರ್‌ ಆಯ್ಕೆ ನಂತರವೂ ಪಾಲಿಕೆಯ ಬಜೆಟ್‌ ಸಭೆಯನ್ನು ಆಯುಕ್ತರು ಹೇಗೆ ಕರೆಯುತ್ತಾರೆ? ಆಯುಕ್ತರಿಗೆ ಬಜೆಟ್‌ ಸಿದ್ಧಪಡಿಸುವ ಅಧಿಕಾರವಿದೆ. ಅದನ್ನು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಅಥವಾ ಮೇಯರ್‌ಗೆ ಸಲ್ಲಿಸಬೇಕು ಅಷ್ಟೇ. ಆದರೆ, ಬಜೆಚ್‌ ಸಭೆ ಕರೆದು ಬಜೆಟ್‌ ಮಂಡಿಸುವ ಅಧಿಕಾರ ಆಯುಕ್ತರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

PRAJADHWANI YATRE: 17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಪಾಲಿಕೆ ಸದನದಲ್ಲಿ ಮೇಯರ್‌ ಅವರೇ ಸರ್ವೋಚ್ಚ. ಅಧಿಕಾರಿಗಳ ಅನುಮತಿ ಇಲ್ಲದೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವಂತಿಲ್ಲ. ಒಂದು ವೇಳೆ ಸದನವು ಕಾನೂನಿಗೆ ವಿರುದ್ಧವಾಗಿ ನಿರ್ಣಯವನ್ನು ಅಂಗೀಕರಿಸಿದರೆ ಮಾತ್ರ ಆಯುಕ್ತರು ಅದನ್ನು ಜಾರಿಗೆ ತರಬಹುದು ಎಂಬ ಟಿಪ್ಪಣಿಯೊಂದಿಗೆ ಸರ್ಕಾರಕ್ಕೆ ಕಳುಹಿಸಬಹುದು ಎಂದರು.

ಆಯುಕ್ತರು ಅಭಿಪ್ರಾಯದೊಂದಿಗೆ ನಿರ್ಣಯವನ್ನು ಮೇಯರ್‌ಗೆ ಸಲ್ಲಿಸಬೇಕು. ಕರ್ನಾಟಕ ಮುನ್ಸಿಪಲ್‌ ಕಾಯಿದೆ ಸೆಕ್ಷನ್‌ 166ರಿಂದ 172ರ ನಡುವೆ ಇಂತಹ ಹಲವಾರು ನಿಬಂಧನೆಗಳಿವೆ. ಆಯುಕ್ತರು ಮತ್ತು ಸಂಬಂಧಪಟ್ಟವರು ಅಧ್ಯಯನ ಮಾಡಬೇಕು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 3-4 ಬಾರಿ ಆಯ್ಕೆಯಾದ ಕೆಲ ಸದಸ್ಯರಿದ್ದಾರೆ. ನಾಲ್ವರು ಶಾಸಕರಿದ್ದಾರೆ. ಆದರೂ ತಪ್ಪು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಧಾರ್ಮಿಕ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಮೇಯರ್‌, ಉಪಮೇಯರ್‌ ಆಯ್ಕೆಯಾದ 15 ದಿನದಲ್ಲಿ ಎಲ್ಲ ಸ್ಥಾಯಿ ಸಮಿತಿಗಳನ್ನು ರಚಿಸಿ, ಅವುಗಳ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂಬ ನಿಯಮವಿದೆ. 1994ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಈ ನಿಯಮ ಪಾಲಿಸಲಾಗುತ್ತಿದೆ. ಆದರೆ, ಈ ವರ್ಷ ಅದನ್ನು ಪಾಲಿಸಲಾಗಿಲ್ಲ ಎಂದು ದೂರಿದರು.

ಪತ್ರಕರ್ತರಿಗೂ ನಿರ್ಬಂಧ

ಮಹಾನಗರ ಪಾಲಿಕೆ ಬಜೆಟ್‌ ಸಭೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರನ್ನೂ ಹೊರಗಿಟ್ಟಿದ್ದಾರೆ. ಪತ್ರಕರ್ತರ ಸಭಾಂಗಣ ಪ್ರವೇಶ ನಿರಾಕರಿಸುವ ಅಧಿಕಾರ ಆಯುಕ್ತರಿಗೆ ಇಲ್ಲ. ನಗರ ಪಾಲಿಕೆಯಲ್ಲಿನ 20 ವರ್ಷಗಳ ವೃತ್ತಿ ಜೀವನದಲ್ಲಿ ಈ ರೀತಿ ಯಾವತ್ತೂ ಆಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಈ ಮೊದಲು ನೇರ ಪ್ರಸಾರ ಮಾಡಲಾಗಿತ್ತು. ಆದರೆ, ಈಗಿನ ಆಯುಕ್ತರು ಅಧಿಕಾರ ಇಲ್ಲದಿದ್ದರೂ ಪತ್ರಕರ್ತರನ್ನು ಸಭೆಗೆ ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಾಬುಬಾಲ್‌ ಬಾಗವಾನ್‌, ಹೇಮಂತ ಲೆಂಗಡೆ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios