ಕಳೆದ ಡಿಸೆಂಬರ್‌ನಲ್ಲಿ ಅರಬ್ಬಿ ಸಮುದ್ರದ ಮಧ್ಯೆ ಕಾಣೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾಗಿವೆ.
ಕಾರವಾರ[ಮಾ. 02] ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಪತ್ತೆಯಾಗಿವೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟ್ ನ ಅವಶೇಷಗಳನ್ನು ಐಎನ್ಎಸ್ ನಿರೀಕ್ಷಕ್ ಪತ್ತೆ ಮಾಡಿದೆ.
ಮಹಾರಾಷ್ಟ್ರ ಬಳಿಯ ಮಾಲವಾಣದಲ್ಲಿ ಬೋಟ್ ಪತ್ತೆಯಾಗಿದೆ ಎಂದು ನೌಕಾದಳದ ವಕ್ತಾರರು ತಿಳಿಸಿದ್ದಾಋಎ. ಮೀನುಗಾರರ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಳೆದ ಡಿಸೆಂಬರ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೊಟ್ ನಾಪತ್ತೆಯಾಗಿತ್ತು. ಡಿ.13ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಡಿ.15ರ ರಾತ್ರಿಯಿಂದ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿದ್ದರು. ಸುವರ್ಣ ತ್ರಿಭುಜ ಬೋಟ್ ನಲ್ಲಿ ಏಳು ಮಂದಿ ಮೀನುಗಾರರಿದ್ದರು.
Scroll to load tweet…
Scroll to load tweet…
