ಮಂಡ್ಯ(ಏ.14): ಮಾಯವಾಗಿದ್ದ ಪುರಾತನ ಶಿವಲಿಂಗ ಮತ್ತೆ ಪ್ರತ್ಯಕ್ಷವಾದ ಘಟನೆ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಗರ್ಭ ಗುಡಿಯಲ್ಲಿ ಮತ್ತೆ ಲಿಂಗ ನೋಡಿದ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.

"

ಕಾಶಿ ವಿಶ್ವನಾಥ ದೇವಾಲಯದಲ್ಲಿ ಮಾಯವಾಗಿದ್ದ  ಲಿಂಗ ಮತ್ತೆ ಗರ್ಭ ಗುಡಿಯಲ್ಲಿಯೇ ಪ್ರತ್ಯಕ್ಷವಾಗಿದೆ. ಸೋಮವಾರ ರಾತ್ರಿ ಶಿವಲಿಂಗ ನಾಪತ್ತೆಯಾಗಿತ್ತು. ದುಷ್ಕರ್ಮಿಗಳು ಲಿಂಗ ಕಳವು ಮಾಡಿದ್ದಾರೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ಗ್ರಾಮಸ್ಥರು ದಾಖಲಿಸಿದ್ದರು.

ಸರ್ಕಾರದ ನಡೆಯಿಂದ ಆತಂಕಗೊಂಡು ಆತ್ಮಹತ್ಯೆಗೆ ಯತ್ನಿಸಿದ KSRTC ಸಿಬ್ಬಂದಿ

ಇಂದು ದೇವಾಲಯದ ಬಳಿಗೆ ಹೋಗಿದ್ದ ಗ್ರಾಮಸ್ಥರಿಗೆ ಶಾಕ್ ಆಗಿದೆ. ಮೊದಲು ಶಿವಲಿಂಗವಿದ್ದ ಸ್ಥಳದಲ್ಲೇ ಪ್ರತ್ಯಕ್ಷವಾಗಿದೆ. 24 ಗಂಟೆಯಲ್ಲೇ ಮತ್ತೆ ಲಿಂಗ ಪ್ರತ್ಯಕ್ಷವಾಗಿದ್ದರಿಂದ ಇದು ದೇವರ ಪವಾಡ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹಲ್ಲೇಗೆರೆ ಗ್ರಾಮದ ಹೊರ ಭಾಗದಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ 450 ವರ್ಷಗಳ ಇತಿಹಾಸ ಹೊಂದಿದೆ. ಪುರಾಣ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾಶಿಯಿಂದ ಶಿವಲಿಂಗ ತಂದು ಪ್ರತಿಷ್ಠಾಪಿಸಲಾಗಿತ್ತು.