Asianet Suvarna News Asianet Suvarna News

ರಸ್ತೆಯಲ್ಲಿ ಚಿಲ್ಲರೆ ಹಣ ಎಸೆದು ಲಕ್ಷಾಂತರ ರು. ನೋಟುಗಳನ್ನು ದೋಚಿದ ದುಷ್ಕರ್ಮಿಗಳು

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲಿ ಚಿಲ್ಲರೇ ನಾಣ್ಯಗಳನ್ನು ಎಸೆದು ಲಕ್ಷಾಂತರ ರು. ನೋಟುಗಳನ್ನು ಎಗರಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

Miscreants looted Rs 3 Lakh In Kolar
Author
Bengaluru, First Published Jun 10, 2019, 7:46 PM IST

ಕೋಲಾರ, [ಜೂನ್.10]: ರಸ್ತೆಯಲ್ಲಿ ಚಿಲ್ಲರೆ ಹಣ ಎಸೆದು 3.30 ಲಕ್ಷ ರು.‌ಹಣ ದೋಚಿರುವ ಘಟನೆ ಕೋಲಾರ ನಗರ ಬಸ್ ನಿಲ್ದಾಣ ಸಮೀಪ ಅಂತರಗಂಗೆ ಬಳಿ ನಡೆದಿದೆ.

ಕೋಲಾರದ ಮುನೇಶ್ವರ ನಗರದ ನಿವಾಸಿ ಮಂಜುನಾಥ್ ಹಣ ಕಳೆದುಕೊಂಡವರು. ಇಂದು [ಸೋಮವಾರ] ನಗರದ ಟಮಕ ಎಂಎಸ್ ಐಎಲ್ ಬಾರ್ ನಿಂದ 3.30 ಲಕ್ಷ ಹಣವನ್ನು ಬೈಕ್ ನಲ್ಲಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು.

ಇದನ್ನು ನೋಡಿದ್ದ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ರಸ್ತೆಯಲ್ಲಿ ಚಿಲ್ಲರೆ ಹಣ ಎಸೆದು ಮಂಜುನಾಥ್ ನನ್ನು ಯಾಮಾರಿಸಿ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಯಾಮಾರುವರು ಇರುವ ತನಕ ಯಾಮಾರಿಸುವವರು ಇದ್ದೇ ಇರುತ್ತಾರೆ. ಹಾಗಾಗಿ ಹಣ, ಚಿನ್ನ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಜಾಗೃತಿಯಿಂದ ಇರುವುದು ಒಳ್ಳೆಯದು.

Follow Us:
Download App:
  • android
  • ios