Asianet Suvarna News Asianet Suvarna News

ಹಾವೇರಿ: 800ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕತ್ತರಿಸಿದ ದುಷ್ಕರ್ಮಿಗಳು

*  ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದ ಘಟನೆ
*  ಏಳು ವರ್ಷಗಳಿಂದ ಮಕ್ಕಳಂತೆ ಮರಗಳನ್ನ ಸಾಕಿ ಬೆಳಸಿದ್ದ ರೈತ
*  ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು 
 

Miscreants Cut Areca Trees Cut Down at Hangal in Haveri grg
Author
Bengaluru, First Published Sep 12, 2021, 12:42 PM IST

ಹಾವೇರಿ(ಸೆ.12):  ಜಮೀನಿನಲ್ಲಿ ಬೆಳೆದು ನಿಂತಿದ್ದ ಸುಮಾರು 800 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ದುಷ್ಕರ್ಮಿಗಳು ಕತ್ತರಿಸಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ.

ಖಲೀಲ್ ಅಹ್ಮದ್ ವಾಲಿಕಾರ್ ಎಂಬುವರಿಗೆ ಸೇರಿದ ಅಡಿಕೆ ಮರಗಳಾಗಿದ್ದು, ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನ ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಅಡಿಕೆ ಮರಗಳನ್ನ ಕತ್ತರಿಸಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಏಳು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳಸಿದ ಮರಗಳನ್ನು ನಾಶಮಾಡಿದ್ದಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳ ಪತ್ತೆಗೆ ಆಡೂರ ಪೊಲೀಸರು ಜಾಲ ಬೀಸಿದ್ದಾರೆ. 
 

Follow Us:
Download App:
  • android
  • ios