ಮಂಗಳೂರು(ಆ.24): ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಪಂಪ್ವೆಲ್‌ನ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಪಂಪ್‌ವೆಲ್‌ನ ‘ಮಸ್ಜಿದುತ್ತಖ್ವಾದ’ ಎಡಭಾಗದಿಂದ ದುಷ್ಕರ್ಮಿಗಳು ಮುಂಜಾನೆ ಸುಮಾರು 3:40ರ ವೇಳೆಗೆ ಸೋಡಾ ಬಾಟಲಿ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಿಂದ ಮಸೀದಿಯ ಕಿಟಕಿಯ ಗಾಜಿಗೆ ಹಾನಿಯಾಗಿದೆ. ಮಸೀದಿಯ ಕಾವಲುಗಾರರ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ಕಾವಲುಗಾರರು ಬೆಳಗ್ಗೆ ಮಸೀದಿಯ ಮಹಡಿ ಹತ್ತಿದಾಗಲೇ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಮಸೀದಿಯ ಪದಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಳ್ಯ: ಕೋಮಾ​ದ​ಲ್ಲಿದ್ದ ವೃದ್ಧೆ ದಿಢೀರ್‌ ಚೇತ​ರಿ​ಕೆ, ಅಂತ್ಯ​ಕ್ರಿ​ಯೆಗೆ ಸಿದ್ಧತೆ ನಡೆ​ಸಿದ್ದ ಕುಟುಂಬ​ಸ್ಥ​ರು..!

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.