ಸುಳ್ಯ(ಆ.24): ಇನ್ನೇನು ಕೆಲವೇ ಕ್ಷಣ​ಗ​ಳಲ್ಲಿ ತೀರಿ​ಕೊಂಡು ಬಿಡು​ತ್ತಾರೆ ಎಂಬ ವೈದ್ಯರ ಸೂಚ​ನೆ​ಯಂತೆ ಕೋಮಾ​ದ​ಲ್ಲಿದ್ದ ವೃದ್ಧೆ​ಯೊ​ಬ್ಬ​ರನ್ನು ಕುಟುಂಬ​ಸ್ಥರು ಮನೆಗೆ ಕೊಂಡೊಯ್ಯುವ ವೇಳೆ ವೃದ್ಧೆ ದಾರಿ ಮಧ್ಯೆ ಚೇತರಿಸಿಕೊಂಡ ಘಟನೆ ಸುಳ್ಯ​ದಲ್ಲಿ ನಡೆ​ದಿ​ದೆ. 

ಮರ್ಕಂಜ ಗ್ರಾಮದ ಪಟ್ಟೆಮನೆ ಹೇಮಾವತಿ ರೈ (80) ಅವ​ರ​ನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೋಮಾಕ್ಕೆ ಜಾರಿದ್ದರು. ಇನ್ನು ಬದುಕುವುದು ಕಷ್ಟ, ಮನೆಗೆ ಕೊಂಡೊಯ್ಯಬಹುದು. ಆಕ್ಸಿಜನ್‌ ಪೈಪ್‌ ತೆಗೆದ ಸ್ವಲ್ಪ ಹೊತ್ತಿನಲ್ಲಿ ಜೀವ ಹೋದೀತು ಎಂಬ ವೈದ್ಯರ ಹೇ​ಳಿಕೆ ಹಿನ್ನೆ​ಲೆ​ಯಲ್ಲಿ ಆಂಬ್ಯು​ಲೆ​ನ್ಸ್‌​ನಲ್ಲಿ ಅವರನ್ನು ಕರೆದುಕೊಂಡು ಮನೆಯವರು ಊರಿ​ಗೆ ಹೊರ​ಟಿ​ದ್ದರು. ಇದೇ ವೇಳೆ ಅವರ ಊರು ಮರ್ಕಂಜದಲ್ಲಿ ಅಂತ್ಯ​ಕ್ರಿ​ಯೆಗೂ ಸಿದ್ಥತೆ ನಡೆ​ಸ​ಲಾ​ಗಿ​ತ್ತು.

ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಆದರೆ ಆಂಬ್ಯುಲೆನ್ಸ್‌ ಊರಿನ ಸಮೀಪ ತಲು​ಪು​ತ್ತಿ​ದ್ದಂತೆ ಇದ್ದ​ಕ್ಕಿ​ದ್ದಂತೆ ವೃದ್ಧೆ ಕೆಮ್ಮಿದರಲ್ಲದೆ ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಚೇತರಿಸಿಕೊಂಡರು. ಕೂಡಲೇ ಮನೆಯವರನ್ನು ಸಂಪರ್ಕಿಸಿ ಅಂತ್ಯಕ್ರಿಯೆಗೆ ನಡೆ​ಸಿದ್ದ ಸಿದ್ಧತೆಯನ್ನು ಸ್ಥಗಿತಗೊಳಿಸಿದರು. ಈಗ ವೃದ್ಧೆ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.