Asianet Suvarna News Asianet Suvarna News

Mandya ವಿದ್ಯಾರ್ಥಿನಿಯರ ಜತೆ ಪ್ರೌಢಶಾಲೆ ಶಿಕ್ಷಕನ ಅಸಭ್ಯ ಮಾತು - ಅಸಹ್ಯದ ವರ್ತನೆ

  • ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆ
  • ಮುಖ್ಯ ಶಿಕ್ಷಕರ ವಿರುದ್ಧ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ
Misbehaver with Girls Students  complaint Against High School Headmaster in mandya snr
Author
Bengaluru, First Published Oct 14, 2021, 3:53 PM IST
  • Facebook
  • Twitter
  • Whatsapp

  ಮಳವಳ್ಳಿ (ಅ.14): ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಎಸ್ಸೆಸ್ಸೆಲ್ಸಿ(SSLC) ವಿದ್ಯಾರ್ಥಿನಿಯರ (Students) ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.

 ಈ ಸಂಬಂಧ ಗ್ರಾಪಂ ಪಿಡಿಒ (PDO) ಸಿದ್ದರಾಜು ಅವರಿಗೆ ವಿದ್ಯಾರ್ಥಿನಿಯರು ಮುಖ್ಯಶಿಕ್ಷಕ ಬೋರಯ್ಯ ಅಸಭ್ಯವಾಗಿ ವರ್ತಿಸಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಶಾಲೆಗೆ (School) ಗ್ರಾಪಂ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ ಅವರ ಜತೆ ಪಿಡಿಒ ತೆರಳಿ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ವಿದ್ಯಾರ್ಥಿನಿಯರು ಏನು ಹೇಳದೇ ಮೌನವಾಗಿದ್ದರಿಂದ ಅಧ್ಯಕ್ಷರು ಮತ್ತು ಪಿಡಿಒ ವಾಪಸಾಗಿದ್ದಾರೆ. 

'ಮಹಿಳಾ ಶಿಕ್ಷಕರಿದ್ದ ಶಾಲೆಯ ಪ್ರಾಂಶುಪಾಲರು 'ಈ' ಮದ್ದು ಸೇವಿಸ್ಬೇಕು!'

ಮತ್ತೆ ಗ್ರಾಪಂಗೆ ವಿದ್ಯಾರ್ಥಿನಿಯರು ಹೋಗಿ ನಮಗೆ ಸಾಕಷ್ಟು ಭಯವಾಗುತ್ತದೆ. ಗಂಡು ಮಕ್ಕಳು ಇರುವುದರಿಂದ ಸಮಸ್ಯೆ ಹೇಳಿಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ದೂರಿನ ಬಗ್ಗೆ ಹೆಣ್ಣುಮಕ್ಕಳನ್ನು (Girls) ಪ್ರತ್ಯೇಕವಾಗಿ ಸಮಲೋಚನೆ ನಡೆಸಬೇಕು ಎಂದು ಮನವಿ ಮಾಡಿದ್ದರು. 

ಹೀಗಾಗಿ ಗಂಡು ಮಕ್ಕಳು (Boys) ಹೊರಗಡೆ ಕಳುಹಿಸಿ ಹೆಣ್ಣುಮಕ್ಕಳನ್ನು ಪ್ರತ್ಯೇಕವಾಗಿ ಸಮಲೋಚನೆ ನಡೆಸಿದ ವೇಳೆ ಮುಖ್ಯಶಿಕ್ಷಕ ಬೋರಯ್ಯ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿ ಕೆಟ್ಟವಾಗಿ ಮಾತಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. 

ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಚಿಕ್ಕಸ್ವಾಮಿ ಅವರಿಗೆ ಪಿಡಿಒ ದೂರು ನೀಡಿದ್ದಾರೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಪ್ರತಿಕ್ರಿಯಿಸಿ ಮುಖ್ಯಶಿಕ್ಷಕರ ಬೋರಯ್ಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿಗೆ ವರದಿ ನೀಡಲಾಗಿದೆ ಎಂದರು.

 ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ನಾನು ಯಾವುದೇ ತಪ್ಪು ಮಾಡಿಲ್ಲ. ದುರುದ್ದೇಶದಿಂದ ಕೆಲವರು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಮುಖ್ಯಶಿಕ್ಷಕ (Head master) ಬೋರಯ್ಯ ಪ್ರತಿಕ್ರಿಯೆ ನೀಡಿದ್ದಾರೆ.  

ಫ್ಲೋರಿಡಾದಲ್ಲೊಂದು ವಿಚಿತ್ರ ಘಟನೆ

ಫ್ಲೋರಿಡಾ(ಅ. 13)  ಈ ಲೇಡಿ ಟೀಚರ್(Teacher) ಎಡವಟ್ಟು ಮಾಡಿಕೊಂಡಿದ್ದಾರೆ. ತನ್ನದೇ ವಿದ್ಯಾರ್ಥಿ ಜತೆ ಸಂಬಂಧ ಬೆಳೆಸಿಕೊಂಡು ಈಗ (Pregnant)ಗರ್ಭಿಣಿಯಾಗಿದ್ದಾರೆ.  ವಿದ್ಯಾರ್ಥಿ(Student) ಜತೆ ಕಾಮದಾಟ (sexual relationship) ಆಡಿದ ಶಿಕ್ಷಕಿಯನ್ನು ಬಂಧಿಸಲಾಗಿದೆ.  ಶಿಕ್ಕಿ ಹೆಸರು ಹ್ಯಾರಿ ಕ್ಲಾವಿ. 41 ವರ್ಷ ಈಕೆ 15 ವರ್ಷ ವಯಸ್ಸಿನ ವಿದ್ಯಾರ್ಥಿ ಜೊತೆಗೆ ಕಾಮದಾಟ ಆಡಿದ್ದಾಳೆ ಶಿಕ್ಷಕಿ ಮತ್ತು ವಿದ್ಯಾರ್ಥಿ  ಖಾಸಗಿ ಕ್ಷಣಗಳನ್ನು ಕಳೆದಿರುವ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಶಿಕ್ಷಕಿಯ ಬಳಿ ಗನ್ ಸಹ ಪತ್ತೆಯಾಗಿದೆ.

ಈಜುಕೋಳದಲ್ಲಿ ಮಹಿಳಾ ಪೇದೆ ಜತೆ ಜಗತ್ತನ್ನೇ ಮರೆತ ಡಿಎಸ್‌ಪಿ

ಬಾಲಕನ ಮೇಲೆ ಆಕೆ ಅತ್ಯಾಚಾರ ಮಾಡಿದ್ದಾಳೆ ಎನ್ನಲು ಸಾಧ್ಯವಿಲ್ಲ. ಇದು ಒಪ್ಪಿತ ಕ್ರಿಯೆಯೇ ಆಗಿರಬಹುದು ಆದರೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕಿ ಈಗ  8 ತಿಂಗಳ ಗರ್ಭಿಣಿ.  ಮಹಿಳೆಯನ್ನು ಕೆಲಸಿದಿಂದ ವಜಾ ಮಾಡಲಾಗಿದೆ. 

Follow Us:
Download App:
  • android
  • ios