ಧಾರವಾಡ ಅರಣ್ಯ ಇಲಾಖೆಯ 'ರೂಟ್ ಸ್ಟಾಕ್' ಯೋಜನೆಯಲ್ಲಿ ಲಕ್ಷ ಲಕ್ಷ ಲೂಟಿ: ಏನಿದು ಆರೋಪ?

ಧಾರವಾಡ ವಿಭಾಗದ ಅರಣ್ಯ ಇಲಾಖೆಯ "ರೂಟ್ ಸ್ಟಾಕ್' ಯೋಜನೆ 83,90,867 ರೂ ಅನುದಾನವನ್ನ ದುರ್ಬಳಕೆ ಮಾಡಿ ಕಾಮಗಾರಿ ಮುಗಿಸದೆ ಲಕ್ಷಾಂತರ ರೂಪಾಯಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ. 

Misappropriation of 83 lakh grant in Dharwad Forest Department Root Stock project gvd

ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಮೇ.18): ಧಾರವಾಡ ವಿಭಾಗದ ಅರಣ್ಯ ಇಲಾಖೆಯ "ರೂಟ್ ಸ್ಟಾಕ್' ಯೋಜನೆ 83,90,867 ರೂ ಅನುದಾನವನ್ನ ದುರ್ಬಳಕೆ ಮಾಡಿ ಕಾಮಗಾರಿ ಮುಗಿಸದೆ ಲಕ್ಷಾಂತರ ರೂಪಾಯಿಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ. ಜೊತೆಗೆ ಈ ಕುರಿತು ಲೋಕಾಯುಕ್ತ ಮತ್ತು ಅರಣ್ಯ ಇಲಾಖೆಯ ಸಚಿವರಿಗೂ ದೂರು ಕೊಟ್ಟು ತಪ್ಪಿತಸ್ಥ ಅಧಿಕಾರಿಗಳ‌ ಮೇಲೆ ಕ್ರಮಕ್ಕೆ ಆಗಹಿಸಿ ಆರ್ ಟಿ ಐ ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ದಾಖಲಾತಿಗಳೋಂದಿಗೆ ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅರಣ್ಯ ಇಲಾಖೆಯ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಎಂದು ಗಂಂಬೀರವಾಗಿ ಆರೋಪವನ್ನ ಮಾಡಿದರು.

ಈ ಯೋಜನೆಯಡಿ ನೆಡುತೋಪುಗಳನ್ನು ನಿರ್ಮಾಣವನ್ನು ಕೆನೋಪಿ ಸ್ಟ್ರೆಥ್ 10% ಕ್ಕಿಂತ ಕಡಿಮೆ ಅಥವಾ, 20-25%, 35-40% ಇರಬೇಕು, ಆದರೆ ಇವರು ಆಯ್ಕೆ ಮಾಡಿದ್ದು,90%ಕ್ಕಿಂತ ಹೆಚ್ಚಿನ ಡೆನಸಿಟಿ ಇರುವ ಏರಿಯಾ (ಥಿಕ್ ಫಾರೆಸ್ಟ್) ದಟ್ಟವಾದ ಅರಣ್ಯದಲ್ಲಿ ನೆಡುತೋಪು ನಿರ್ಮಾಣ ಮಾಡಿದ್ದಾರೆ ಈ ನೆಡುತೋಪನ್ನು ಮಾಡುವ ಸುತ್ತಲೂ 5860 ಮೀಟರ್ ಮುಳ್ಳು ತಂತಿ ಬೇಲಿ ಅಳವಡಿಸಬೇಕಾಗಿತ್ತು.ಆದರೆ ಇವರು ಅಳವಡಿಸಿದ್ದು ಕೇವಲ ಅರ್ಧಕ್ಕೆ ಮಾತ್ರ.   ಇದಕ್ಕೆ ಒಟ್ಟು 2603 ಸೆಮೆಂಟ್ ಕಂಬ ಬಳಸಿ ಮುಳ್ಳು ತಂತಿ ಬೇಲಿ ನಿರ್ಮಾಣ ಮಾಡಬೇಕಾಗಿತ್ತು. ಸಿಮೆಂಟ್ ಕಂಬವನ್ನು ಕಂಬ ಪ್ರತಿ‌ಮೂರು ಮೀಟರ್ ಗೆ ಒಂದು ಇರಬೇಕು. ಪ್ರತಿ ಆರು ಕಂಬಕ್ಕೆ ಎರಡು ಸಪೋರ್ಟ್ ಕಂಬ ಹಾಕಬೇಕಿತ್ತು. ಇವರು ಮಾಡಿದ್ದು ಹತ್ತು ಕಂಬಕ್ಕೆ ಎರಡು ಸಪೋರ್ಟ್ ಕಂಬ ಅಳವಡಿಸಿದ್ದಾರೆ ಇದಕ್ಕೆ ಸರಕಾರದ ಕಡತಗಳೇ ಸಾಕ್ಷಿ ಹೇಳುತ್ತಿವೆ ಎಂದು ಹೇಳಿದರು

Chikkaballapur: ಪಾತಾಳಕ್ಕೆ ಕುಸಿದ ದ್ರಾಕ್ಷಿ ಬೆಲೆ: ಕಂಗಾಲಾದ ಬೆಳೆಗಾರ

ಈ ಯೋಜನೆ 22-23, 23-24 ಯೋಜನೆ ಅವಧಿ 150 ಹೆಕ್ಟರ್ ಪ್ರದೇಶದಲ್ಲಿ 50 ಹೆಕ್ಟೇರ್ ಪ್ರದೇಶ ಆಯ್ಕೆ‌ ಮಾಡಿ ಅದರಲ್ಲಿ  ಗುಂಡಿ‌ ತಗೆದು 6000 ಸಸಿಗಳನ್ನು ನೆಡಲು ಯೋಜನೆ ಇತ್ತು ಆದರೆ ಇವರು 3000 ಸಸಿಗಳನ್ನು ನೆಟ್ಟಿದ್ದಾರೆ ಇನ್ನೂಳಿದ 3000 ಗುಂಡಿಗಳನ್ನು ತಗೆಯದೇ‌ ಉಳಿದ ಸಾವಿರಾರು ‌ಸಸಿಗಳನ್ನು ನಾಶ ಮಾಡಿದ್ದಾರೆ.ಈ ನೆಡುತೋಪು ಮಾಡುವ ಸುತ್ತಲೂ 3-ಮೀ ಅಗಲದ ಫೈರ್ ಫೆನ್ಸಿಂಗ್ - ಪಾತ್ ನಿರ್ಮಾಣ (FORAMATION OF NEW EXTRACTION PATH) ಮಾಡಬೇಕಿತ್ತು ಇದರ ಅನುದಾನ ರೂ 237627 ಗಳನ್ನು ಕೆಲಸ ಮಾಡಿಸದೇ ಹಣ ತಗೆದಿರುತ್ತಾರೆ ಅಲ್ಲದೆ  ಡಿ.ಸಿ.ಎಫ್ ಸ್ಥಳ ಪರಿಶೀಲನೆ ಮಾಡದೇ ಯೋಜನೆ ಅನುದಾನದ ಬಿಲ್ ಮಂಜೂರು ಮಾಡಲಾಗಿದೆ ಇದರ ಉದ್ದೇಶ ದುಡ್ಡು ಹೊಡೆಯುವುದಾಗಿ ಸ್ಥಳ ಪರಿಶೀಲನೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆ ಇದರಲ್ಲಿ  ಡಿ.ಆರ್.ಎಫ್.ಓ, ಆರ್.ಎಪ್.ಓ,  ಎಸಿಎಫ್, ಡಿ.ಸಿ.ಎಫ್ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ 432 ನೀರು ಇಂಗು ಗುಂಡಿ ನಿರ್ಮಾಣ ಮಾಡಬೇಕಿತ್ತು ಇವರು ನಿರ್ಮಾಣ ಮಾಡಿದ್ದು ಕೇವಲ 200 ಇಂಗು ಗುಂಡಿ ಮಾತ್ರ ತಗೆದಿರುವುದು ಕಂಡು ಬರುತ್ತಿದೆ ನೆಡುತೋಪುಗಳನ್ನು ಬೆಳೆಸಲು ಮಣ್ಣು ಮತ್ತು ಪೋಷಕಾಂಶ ಪರೀಕ್ಷೆ ಮಾಡಬೇಕಿತ್ತು ಆದರೆ ಇದು ಮಾಡಿರುವುದಿಲ್ಲ ನೆಡುತೋಪುಗಳ ನಿರ್ಮಾಣ ಕಾಮಗಾರಿಗೆ ವರ್ಕ್ ಅಗ್ರಿಮೆಂಟ್ ಇಲ್ಲ. ವರ್ಕ್ ಆರ್ಡರ್ ಕೂಡ ಇಲ್ಲ ತುಂಡು ಗುತ್ತಿಗೆ ಕಾಮಗಾರಿ ಮಾಡುವಾಗ ಕೂಡ ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ಕೊಟ್ಟು, ಅವರಿಂದ ಕೆಲಸ ಮಾಡಿಸದೇ ದುಡ್ಡು ಹೊಡೆದಿದ್ದಾರೆ. ಗುತ್ತಿಗೆದಾರರ ಹೆಸರಿನಲ್ಲಿ ಇವರೆ ಬಿಲ್ ತೆಗೆದಿದ್ದಾರೆ ಎಂಬ ಅನುಮಾನ‌ ನಮಗೆ ಕಾಡುತ್ತಿದೆ ಎಂದರು. ಅಳತೆ ಪುಸ್ತಕದಲ್ಲಿ ಎಂದರೆ FNB (Field Note Book) ನಲ್ಲಿ ಗುತ್ತಿಗೆದಾರ ಸಹಿ ಮಾಡದೆ, DRFO ಸಹಿ ಇಲ್ಲದೇ,  ಹಣ ಬಿಡುಗಡೆ ಮಾಡಲಾಗಿದೆ.

ಈ ಕಾಮಗಾರಿಗಳನ್ನು  ಶೇ 100 ರಷ್ಟು ಪರಿಶೀಲಿಸಿ ದೃಡೀಕರಿಸಬೇಕಾದ ಅಧಿಕಾರಿ ಎಸಿಎಪ್ ಶ್ರೀಮತಿ ಪರಿಮಳ‌ ಹುಲಗಣ್ಣವರ ಇವರು ಕೆಲಸ ಆಗಿದೆ ಎಂದು ಸುಳ್ಳು ದೃಢೀಕರಿಸಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ನಂತರ ಕಾಮಗಾರಿ ಮುಗಿದ ಮೇಲೆ ಇದನ್ನು ಡಿ.ಸಿ.ಎಪ್‌ ಆದಂತಹ ಸೋನಲ್‌ ಇವರು 10% ಚೆಕ್ ಮೆಜರ್ ಮೆಂಟ್‌ ಮಾಡಿ ಬಿಲ್ ಅನುಮೋದನೆ ಮಾಡಬೇಕಿರುತ್ತದೆ ಆದರೆ ಇದ್ಯಾವುದನ್ನೂ ಮಾಡದೇ ಈ ಕಾಮಗಾರಿಗಳ ಬಿಲ್  ಆಗಿರುತ್ತದೆ ಕಾಮಗಾರಿಯು ಮಾರ್ಚ್-2023  ನಲ್ಲಿ ಮುಗಿದಿರುವುದಾಗಿ ಚೆಕ್ ಮೆಜರ್ಮೆಂಟ್ ಎಸಿಎಫ್ ಶ್ರೀಮತಿ ಪರಿಮಳ ಹುಳಗನ್ನವರ್ ಮಾಡಿರುತ್ತಾರೆ ಆದರೆ 2023 ರ ಎಪ್ರಿಲ್-ಮೇನಲ್ಲಿ ಕಾಮಗಾರಿ ಅಪೂರ್ಣ ಆಗಿರುವುದು ಫೋಟೋ ಮುಖಾಂತರ ಕಂಡು ಬರುತ್ತದೆ ಎಂಬುದು ಅಚ್ಚರಿ ಆತಂಕದ ಸಂಗತಿಯಾಗಿದೆ.

ಈ ರೀತಿಯಾಗಿ ಸರ್ಕಾರದ ಕಾಮಗಾರಿಗಳನ್ನು ಸರಿಯಾಗಿ ಮಾಡದೇ ಸುಳ್ಳು  ಬಿಲ್ ಮಂಜೂರು ಮಾಡಿದ ಧಾರವಾಡ ವಿಭಾಗದ ಅರಣ್ಯ ಇಲಾಖೆಯ ಡಿ.ಎಫ್.ಓ  ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ‌ ಸೋನಲ್  ವೃಷ್ಣಿ ಶ್ರೀಮತಿ ಪರಿಮಳ ಹುಲಗಣ್ಣವರ ಎ.ಸಿ.ಎಫ್ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಪ್ರದೀಪ ಪವಾರ ವಲಯ ಅರಣ್ಯ ಅಧಿಕಾರಿ,ರಾಮಲಿಂಗಪ್ಪ ಉಪ್ಪಾರ ವಲಯ ಅರಣ್ಯ ಅಧಿಕಾರಿ, ಪರಶುರಾಮ ಮಣಕೂರ ಉಪವಲಯ ಅರಣ್ಯಾಧಿಕಾರಿ  ವಿರುದ್ಧ  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ಸಲ್ಲಿಸಿದ್ದಾರೆ.

ರೆಸ್ಪಿ ಸೌತೆಕಾಯಿ ಬೆಳೆದು ಲಕ್ಷಾಧೀಶ್ವರನಾದ ರೈತ: ವಕೀಲಿ ವೃತ್ತಿ ಜತೆ ಕೃಷಿಕನಾದ ಗಂಗರಾಜ್‌!

ಹೀಗಾಗಿ ಈ ಪ್ರಕರಣವನ್ನು ಅರಣ್ಯ ಇಲಾಖೆಯ ವತಿಯಿಂದ ಮಾಡಿಸದೇ ಲೋಕಾಯುಕ್ತ ತನಿಖೆಗೆ ನೀಡಬೇಕು ಎಂದು ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ‌ ಈ ಮೂಲಕ ಸತ್ಯಾಂಶ ಹೊರಬರಬೇಕು ಧಾರವಾಡ ವಲಯದ ಒಂದು ಕಾಮಗಾರಿಯಲ್ಲಿ 83,90,867 ರೂಪಾಯಿಗಳು ಅವ್ಯವಹಾರ ಹಾಗೂ ಭ್ರಷ್ಟಾಚಾರ ಆಗಿರುವ ಬಗ್ಗೆ ದಾಖಲೆ ಸಮೇತ ಗೌರವಾನ್ವಿತ ಲೋಕಾಯುಕ್ತಕ್ಕೆ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ , ಅರಣ್ಯ ಇಲಾಖೆಯ ಮುಖ್ಯಸ್ಥರಾದ ಬೃಜಿಶಕುಮಾರ್ ದೀಕ್ಷಿತ್ IFS ಪಿಸಿಸಿಎಪ್ ,  APCCF ಅವರಿಗೆ ಗಮನಕ್ಕೆ‌ ತಂದು ದೂರು ಕೊಡಲಾಗಿದೆ ಎಂದು ವಕೀಲ ಸುರೇಂದ್ರ ಉಗಾರೆ  ಅಧಿಕಾರಿಗಳ ಮೆಲೆ ತನಿಖೆ ಆಗಬೇಕು ಬೋಗಸ್ ಬಿಲ್‌ಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯ ಮಾಡಿದರು.

Latest Videos
Follow Us:
Download App:
  • android
  • ios