ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ನಡೆದಿದೆ. ಅಪ್ರಾಪ್ತ ಮಗಳ ಮೇಲೆ ಈ ಕ್ತೃ ಎಸಗಿದ್ದು, ಆತನನ್ನು ಹಿಡಿದು ಥಳಿಸಲಾಗಿದೆ.

Minor Girl Sexually Harassed By Her Father In Bhadravathi

ಭದ್ರಾವತಿ (ಡಿ.22): ತಂದೆಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತಾಲೂಕಿನ ಸಿರಿಯೂರು ತಾಂಡಾದಲ್ಲಿ ನಡೆದಿದೆ. 

ಉಮೇಶ್ ನಾಯ್ಕ (38) ಎಂಬಾತ ಸಿಕ್ಕಿ ಬಿದ್ದಿದ್ದು, ಶುಕ್ರವಾರ ರಾತ್ರಿ ಈತನ ಪತ್ನಿ ನೇತ್ರಬಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದ ಸಂದರ್ಭ 13 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. 

ಬಾಲಕಿ ಕೂಗಿಕೊಂಡ ಹಿನ್ನ್ನೆಲೆ ಮನೆಯಲ್ಲಿದ್ದ ದೊಡ್ಡ ಮಗಳು ಬಂದು ಬಿಡಿಸಿದ್ದು, ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಈತನನ್ನು ಹಿಡಿದು
ಥಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನರ ಥಳಿತದಿಂದ ಸ್ವಲ್ಪಮಟ್ಟಿಗೆ ಅಸ್ವಸ್ಥಗೊಂಡಿದ್ದ ಈತನನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios