POCSO case: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ: ಪೋಕ್ಸೋ ಆರೋಪಿ ಖುಲಾಸೆ ತೀರ್ಪು

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗಿರುವ ಆರೋಪದಡಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ್‌ ಅಂಚನ್‌ ಎಂಬಾತನ್ನು ಎರಡನೇ ಜಿಲ್ಲಾ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ನಿರಪರಾಧಿ ಎಂದು ತೀರ್ಮಾನಿಸಿ ದೋಷಮುಕ್ತ ಗೊಳಿಸಿದೆ.

Minor girl rape case mangaluru corut vedict rav

ಮಂಗಳೂರು (ಜ.21) : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗಿರುವ ಆರೋಪದಡಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಸತೀಶ್‌ ಅಂಚನ್‌ ಎಂಬಾತನ್ನು ಎರಡನೇ ಜಿಲ್ಲಾ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ನಿರಪರಾಧಿ ಎಂದು ತೀರ್ಮಾನಿಸಿ ದೋಷಮುಕ್ತ ಗೊಳಿಸಿದೆ.

ಸತೀಶ್‌ ಅಂಚನ್‌(Satish anchan) ಆಟೋ ಚಾಲಕನಾಗಿದ್ದು, ಅಪ್ರಾಪ್ತೆಯನ್ನು ಐದು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡು ಶಾಲೆಗೆ ತೆರಳುವಾಗ ತನ್ನ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. 2020ರ ಜುಲೈನಲ್ಲಿ ಒಂದು ದಿನ ಸಂಜೆ ಆಕೆ ಪೇಟೆಯಿಂದ ಬಟ್ಟೆತೆಗೆದುಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಆರೋಪಿ, ಆಕೆಯನ್ನು ಆಟೋದಲ್ಲಿ ಬರುವಂತೆ ಕರೆದಿದ್ದಾನೆ. ಆಕೆ ನಿರಾಕರಿಸಿದ್ದು, ಅದಕ್ಕೆ ನಿನ್ನ ಫೋಟೋ ನನ್ನ ಬಳಿ ಇದ್ದು, ನನ್ನ ಜತೆ ಬಂದು ದೈಹಿಕ ಸಂಪರ್ಕ ನಡೆಸು, ಇಲ್ಲದಿದ್ದರೆ ಫೋಟೋ ವೈರಲ್‌ ಮಾಡುವುದಾಗಿ ಬೆದರಿಸಿದ್ದನು. ಇದರಿಂದ ಹೆದರಿದ ಬಾಲಕಿ ಆಟೋದಲ್ಲಿ ಕುಳಿತಿದ್ದು, ಕಲ್ಲಮುಂಡ್ಕೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ನಡೆಸಿ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಆಕೆಯನ್ನು ಮತ್ತು ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ.

ಸಂತ್ರಸ್ತೆ ಮದುವೆಯಾದ ರೇಪ್‌ ಆರೋಪಿ: ಕೇಸ್‌ ಮುಕ್ತಾಯ

ಬಾಲಕಿ ಗರ್ಭಿಣಿಯಾಗಿದ್ದು, ಮಂಗಳೂರಿನ ಮಹಿಳಾ ಠಾಣೆಯಲ್ಲಿ ಸತೀಶ್‌ ವಿರುದ್ಧ ಪೋಕ್ಸೋ ಕಾಯ್ದೆ(Pocso act)ಯಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ನಂತರ ಆಕೆಯ ಗರ್ಭಪಾತ ಮಾಡಿಸಿದ್ದು, ಭ್ರೂಣವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ, ಭ್ರೂಣದ ಜೈವಿಕ ವರ್ಗೀಕರಣದ ಪ್ರಕಾರ ಆರೋಪಿಯೇ ಜೈವಿಕ ತಂದೆ ಎಂದು ವರದಿ ಬಂದಿತ್ತು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಎಫ್‌ಟಿಎಸ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು, ಆರೋಪಿ ಪರ ಮತ್ತು ಪ್ರಾಸಿಕ್ಯೂಶನ್‌ ಪರ ವಾದ ಆಲಿಸಿ, ನೊಂದ ಬಾಲಕಿಯ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇದೆ ಎಂದು ಸಾಬೀತು ಪಡಿಸಲು ಪ್ರಾಸಿಕ್ಯೂಶನ್‌ ವಿಫಲವಾಗಿದ್ದು, ಪ್ರಕರಣವು ‘ಒಪ್ಪಿಗೆಯ ಲೈಂಗಿಕ ಸಂಪರ್ಕ’ ಎಂದು ಪರಿಗಣಿಸಿ ಸತೀಶ್‌ ಅಂಚನ್‌ನನ್ನು ನಿರಪರಾಧಿ ಎಂದು ತೀರ್ಪು ನೀಡಿದ್ದಾರೆ.

9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್..!

ಆರೋಪಿ ಪರ ಮಂಗಳೂರಿನ ವಕೀಲರಾದ ಎಸ್‌.ಪಿ.ಚಂಗಪ್ಪ, ರಹಿಯಾನಾ, ಭವ್ಯ, ವಿನುತಾ ಕುಟಿನೋ, ಸೋನಲ್‌ ಮಂಡನ್‌ ಮತ್ತ ಶ್ವೇತಾ ವಾದಿಸಿದ್ದರು.

Latest Videos
Follow Us:
Download App:
  • android
  • ios