ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಬಾಲಕಿ ನೇಣಿಗೆ ಶರಣು

  • ಪ್ರಿಯಕರನ ಜೊತೆಗೆ ವಾಸಿಸುತ್ತಿದ್ದ ಬಾಲಕಿ ನೇಣಿಗೆ ಶರಣು
  • ಒಂದು ವರ್ಷದಿಮದ ಪೋಷಕರ ತೊರೆದು ಪ್ರಿಯಕರನ ಮನೆಯಲ್ಲಿದ್ದ ಅಪ್ರಾಪ್ತೆ
  • ಬಾಲಕಿ ಪೋಷಕರಿಂದ ಕೊಲೆ ಆರೋಪ 
Minor girl Commits Suicide in chikkaballapur snr

ಗುಡಿಬಂಡೆ (ಮೇ.26): ಪಟ್ಟಣದ 5ನೇ ವಾರ್ಡಿನ ಮಾರುತಿ ಸರ್ಕಲ್‌ ಬಳಿ 16 ವರ್ಷದ ಬಾಲಕಿ ತನ್ನ ಹುಟ್ಟುಹಬ್ಬಕ್ಕೆ ಗಂಡ ಹೊಸ ಬಟ್ಟೆಯನ್ನು ತೆಗೆದುಕೊಟ್ಟಿಲ್ಲ ಎಂದು ಮನನೊಂದು ಮಂಗಳವಾರ ಬೆಳಿಗ್ಗೆ ಸುಮಾರು 7.30ರ ಸಮಯದಲ್ಲಿ ಮಹಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಬಾಲಕಿ ಮತ್ತು ಮಹದೇವ ಅಲಿಯಾಸ್‌ ಮಣಿ ಒಂದೂವರೆ ವರ್ಷದಿಂದ ಪ್ರೀತಿಸಿದ್ದು ಒಂದು ವರ್ಷದಿಂದ ಮಹದೇವನ ಮನೆಯಲ್ಲೇ ಇದ್ದಳು. ಕಳೆದ 3 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು ಎನ್ನಲಾಗಿದೆ.

ಜಾಮೂನು ಕೊಡಿಸುತ್ತೇವೆ ಎಂದು ನಂಬಿಸಿ ಅತ್ಯಾಚಾರ ಎಸಗಿದ ದುರುಳರು ..

ಮೃತಳು ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಬಳಿಯ ಬೇವನಹಳ್ಳಿ ಗ್ರಾಮದ ರಾಜು ಎಂಬುವರ ಮಗಳು. ಈಕೆ 9ನೇ ತರಗತಿ ಓದುತ್ತಿದ್ದಾಗಲೇ ತಾನು ಪ್ರೀತಿಸಿದ ಮಹಾದೇವನ ಜತೆ ಓಡಿ ಹೋಗಿದ್ದಳು. ಈ ಬಗ್ಗೆ ಪೊಷಕರು ಮಂಚೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಮಹದೇವನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮೃತಳನ್ನು ಕೆಲವು ದಿನ ಚಿಕ್ಕಬಳ್ಳಾಪುರ ಮಹಿಳಾ ಸ್ವಾಂತಾನ ಕೇಂದ್ರದಲ್ಲಿ ಇರಿಸಿ ನಂತರ ಬಾಲಕಿಯ ಪೋಷಕರಿಗೆ ಒಪ್ಪಿಸಿದ್ದರು.

ಆದರೆ ಬಾಲಕಿ ಮರಳಿ ಮನೆಗೆ ಬಂದಿರುವ ವಿಷಯ ತಿಳಿದ ಮಹದೇವ ರಾತ್ರೋ ರಾತ್ರಿ ಅವರ ಮನೆಗೆ ಹೋಗಿ ಜಗಳ ಮಾಡಿ ಆಕೆಯನ್ನು ತನ್ನ ಮನಗೆ ಕರೆತಂದು 1 ವರ್ಷಗಳ ಕಾಲ ತನ್ನ ಪೋಷಕರ ಜತೆ ಇರಿಸಿಕೊಂಡು ಜೀವನ ಸಾಗಿಸುತ್ತಿದ್ದನು.

ಆದರೆ ಕಳೆದ ಒಂದು ವಾರದಿಂದ ಮೃತಳು ಮಹದೇವನನ್ನು ತನ್ನ ಹುಟ್ಟುಹಬ್ಬಕ್ಕೆ ಹೊಸ ಬಟ್ಟೆಯನ್ನು ಕೊಡಿಸು ಎಂದು ಒತ್ತಾಯಿಸಿದ್ದಾಳೆ. ಲಾಕ್‌ಡೌನ್‌ನಿಂದ ಎಲ್ಲಾ ಬಟ್ಟೆಅಂಗಡಿಗಳಿಲ್ಲ ಬಂದ್‌ ಆಗಿವೆ ಕೊಡಿಸುವೆ ಎಂದು ತಿಳಿಸಿದ್ದಾನೆ. ಜನ್ಮ ದಿನಕ್ಕೂ ನನಗೆ ಬಟ್ಟೆಕೊಡಿಸಲು ಇವರಿಗೆ ಆಗಲಿಲ್ಲವಲ್ಲ ಎಂದು ಕೋಪಗೊಂಡ ಪರಿಣಾಮ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆದರೆ ಮೃತಳ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿ ಗುಡಿಬಂಡೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios