Asianet Suvarna News Asianet Suvarna News

ಜನತಾ ದರ್ಶನ: ವೃದ್ಧೆಗೆ ಹಣ ನೀಡಿದ ಸಚಿವ ಜಮೀರ್‌ ಅಹಮದ್‌ ಖಾನ್‌

ಹಾವೇರಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚು ಜನರು ಬಂದಿದ್ದರಿಂದ ಅವರಿಂದ ಅರ್ಜಿ ಸ್ವೀಕರಿಸಲು ಪರದಾಡಬೇಕಾಯಿತು. ಅರ್ಜಿ ಸ್ವೀಕರಿಸಲೆಂದು ತೆರೆಯಲಾಗಿದ್ದ ಪ್ರತ್ಯೇಕ ಕೌಂಟರ್‌ಗಳನ್ನು ಅರ್ಧದಲ್ಲೇ ಮುಚ್ಚಿಕೊಂಡು ಹೋದ ಪ್ರಸಂಗವೂ ಜರುಗಿತು. 

Minister Zameer Ahmed Khan Given Money to Old age Woman in Janata Darshan grg
Author
First Published Sep 26, 2023, 9:20 AM IST

ಹಾವೇರಿ(ಸೆ.26): ಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಲೂ ಸಾಧ್ಯವಾಗದೇ ಜನರು ಪರದಾಡಿದ್ದಲ್ಲದೇ, ಜನಜಂಗುಳಿಯಿಂದ ನೂಕುನುಗ್ಗಲಾಗಿ ಜಿಲ್ಲಾಡಳಿತದ ಅವ್ಯವಸ್ಥೆ ಪ್ರದರ್ಶನಗೊಂಡು, ಹಾವೇರಿಯ ಜನತಾದರ್ಶನ ಕಾರ್ಯಕ್ರಮವೇ ಗೊಂದಲದ ಗೂಡಾಗಿ ಪರಿಣಮಿಸಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚು ಜನರು ಬಂದಿದ್ದರಿಂದ ಅವರಿಂದ ಅರ್ಜಿ ಸ್ವೀಕರಿಸಲು ಪರದಾಡಬೇಕಾಯಿತು. ಅರ್ಜಿ ಸ್ವೀಕರಿಸಲೆಂದು ತೆರೆಯಲಾಗಿದ್ದ ಪ್ರತ್ಯೇಕ ಕೌಂಟರ್‌ಗಳನ್ನು ಅರ್ಧದಲ್ಲೇ ಮುಚ್ಚಿಕೊಂಡು ಹೋದ ಪ್ರಸಂಗವೂ ಜರುಗಿತು. .

ದಾವಣಗೆರೆ: ಜನತಾ ದರ್ಶನದಲ್ಲಿ ಹರಿದುಬಂದ ಸಮಸ್ಯೆಗಳ ಮಹಾಪೂರ!

ವೃದ್ಧೆಗೆ ಹಣದ ನೀಡಿದ ಸಚಿವ ಜಮೀರ್‌!
ಹೊಸಪೇಟೆ: ನಗರದಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ವೃದ್ಧೆಯೊಬ್ಬರಿಗೆ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಕಂತೆ ಹಣ ನೀಡಿ ಮಾನವೀಯತೆ ಮೆರೆದ ಪ್ರಸಂಗವೂ ಜರುಗಿತು.

ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಹಣ ಕಟ್ಟಲು ಆಗದೆ ಆಸ್ಪತ್ರೆಗೆ ದಾಖಲಾಗಲೂ ಆಗುತ್ತಿಲ್ಲ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಬಳಿ ಅಜ್ಜಿಯೊಬ್ಬಳು ಅಳಲು ತೋಡಿಕೊಂಡರು. ಕೂಡಲೇ ಸಚಿವರು ಅಜ್ಜಿಗೆ ಕೈತುಂಬ ಹಣ ನೀಡಿ, ‘ಮೊದಲು ಚಿಕಿತ್ಸೆ ಪಡೆಯಿರಿ’ ಎಂದು ಹೇಳಿ ಕಳುಹಿಸಿದರು. ಸಚಿವರು ಹಣ ನೀಡುತ್ತಿದ್ದಂತೆ, ಸಚಿವರಿಗೆ ಕೈಮುಗಿದ ಅಜ್ಜಿ ಭಾವುಕರಾದರು.

Follow Us:
Download App:
  • android
  • ios