ಬಳ್ಳಾರಿ(ಡಿ.02): ದೇವೇಗೌಡರ ಕುಟುಂಬ ಹಲವು ವರ್ಷಗಳಿಂದ ತೋಳ ಕುರಿ ಕಥೆ ಹೇಳಿಕೊಂಡು ಬಂದಿದ್ದಾರೆ. ಒಂದೆರಡು ಬಾರಿ ಕಥೆ ನಿಜವಾಗಿದೆ. ಆದ್ರೆ ಈ ಬಾರಿ‌ ಅದು‌ ನಿಜವಾಗಲ್ಲ. ಪ್ರತಿಬಾರಿ ಪೆಪ್ಪರ್ ಮೆಂಟ್ ಹೂವನ್ನು ಕಿವಿ ಮೇಲೆ ಇಡೋ ಕೆಲಸ ಮಾಡ್ತಿದ್ದಾರೆ. ಈ ಬಾರಿ ಅದು ನಡೆಯಲ್ಲ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳುವ ಮೂಲಕ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ. ಸರ್ಕಾರ ಸ್ಥಿರವಾಗಿ ಬರುತ್ತದೆ. ಯಾವುದೇ ಡೌಟ್ ಯಾರಿಗೂ ಬೇಡವೆಂದ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಯಾವತ್ತು ಸೋತಿಲ್ಲ. ಈ ಬಾರಿ ಸೋತಿದ್ದಾರೆ. ಸೋತು ಕೇವಲ ಆರು ತಿಂಗಳಾಗಿದೆ. ಒಂದು ಐದು ವರ್ಷ ಮನೆಯಲ್ಲಿ ಕುಳಿತು ರೆಸ್ಟ್ ತೆಗೊಳ್ಳಿ ಎಂದು ಲೇವಡಿ ಮಾಡಿದ್ದಾರೆ. 
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ಮೊದಲು ರಾಜೀನಾಮೆ ಕೊಟ್ಟಿದ್ರು, ಮೊದಲು ಈಗ ಅವರೇ ಗೆಲ್ತಾರೆ, ಹದಿನೈದು ಸೀಟು ಗೆಲ್ಲೋದು ಪಕ್ಕಾ ಆಗಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.