ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜೂ.7ರವರೆಗೆ ಸೆಮಿ ಲಾಕ್‌ಡೌನ್ ನಿರ್ಬಂಧಗಳು ಜಾರಿ ಪ್ರಸ್ತುತ ಶೇ.10ರಷ್ಟುಸೋಂಕಿನ ಪ್ರಮಾಣ ಇಳಿಕೆ ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್‌ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ
ದಾವಣಗೆರೆ (ಮೇ.31) : ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜೂ.7ರವರೆಗೆ ಸೆಮಿ ಲಾಕ್‌ಡೌನ್ ನಿರ್ಬಂಧಗಳು ಜಾರಿಯಲ್ಲಿರಲಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಸಚಿವ ಸೋಮಣ್ಣ ಪ್ರಸ್ತುತ ಶೇ.10ರಷ್ಟುಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಕಡಿಮೆಯಾಗಬೇಕಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೂ.7ರ ನಂತರವೂ ನಿರ್ಬಂಧಗಳನ್ನು ಮುಂದುವರಿಸಬೇಕಾ, ಬೇಡವಾ ಎಂಬುದನ್ನು ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸುವರು ಎಂದಿದ್ದಾರೆ.
ಸದ್ಯ ರಾಜ್ಯದಲ್ಲಿ ಕೊಂಚ ಮಟ್ಟಿಗಷ್ಟೇ ಸೋಂಕು ಇಳಿದಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿಯೇ ಕಾಡುತ್ತಿದೆ.
