ಮೈಸೂರು(ಮೇ.31): ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಿದ ಬೆನ್ನಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗಿಸಲಾಗುತ್ತಿದೆ. 

ಒಟ್ಟು 60 ಮಕ್ಕಳಿಗೆ ಲಸಿಕೆ ಪ್ರಯೋಗಿಸಲಾಗುತ್ತಿದೆ. 12-18 ವರ್ಷದ ಮಕ್ಕಳಿಗೆ ಮೊದಲು ಪ್ರಯೋಗ. 6ರಿಂದ 12 ವರ್ಷದವರಿಗೆ 2ನೇ ಹಂತದಲ್ಲಿ ಹಾಗೂ 2ರಿಂದ 6 ವರ್ಷದ ಮಕ್ಕಳಿಗೆ ಮೂರನೇ ಹಂತದಲ್ಲಿ ಪ್ರಯೋಗ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರದೀಪ್‌, ಡಾ.ಪ್ರಶಾಂತ್‌ ವಿವರಿಸಿದ್ದಾರೆ. 

ಸೋಂಕಿತರೊಂದಿಗೆ ನೇರ ಚರ್ಚೆ : ಭೇಟಿ ವೇಳೆ ಮಾಹಿತಿ ಪಡೆದ ಸೋಮಶೇಖರ್

ಹೀಗೆ ಲಸಿಕೆ ಪಡೆದ ಮಕ್ಕಳ ರಕ್ತದ ಸ್ಯಾಂಪಲ್‌ ಅನ್ನು ಪ್ರತಿ ತಿಂಗಳೂ ಪಡೆದು ಆ್ಯಂಟಿ ಬಾಡೀಸ್‌ ಬದಲಾವಣೆ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona