ರೇಪ್‌ ಆಗ್ತಾವೆ, ಏನು ಮಾಡೋಕಾಗುತ್ತೆ?: ಸಚಿವ ಕತ್ತಿ

*  ಆರಗ ಬಳಿಕ ಮತ್ತೊಬ್ಬ ಸಚಿವನ ಅಸೂಕ್ಷ್ಮ ಹೇಳಿಕೆ
*  ವಿವಾದಕ್ಕೆ ಕಾರಣವದ ಸಚಿವ ಕತ್ತಿ ಹೇಳಿಕೆ 
*  ಈ ಬಗ್ಗೆ ಹೆಚ್ಚು ಮಾತನಾಡಲು ನಾನು ಗೃಹ ಸಚಿವನಲ್ಲ 

Minister Umesh Katti React on Mysuru Gang Rape Case grg

ಚಾಮರಾಜನಗರ(ಆ.28):  ಮೈಸೂರು ಗ್ಯಾಂಗ್‌ ರೇಪ್‌ ಸಂತ್ರಸ್ತೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಅಸೂಕ್ಷ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಮತ್ತೊಬ್ಬ ಸಚಿವ ಉಮೇಶ್‌ ಕತ್ತಿ ಕೂಡ ಅಸೂಕ್ಷ್ಮ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಸಮಾಜದಲ್ಲಿ ಅತ್ಯಾಚಾರಗಳು ನಡೆಯುತ್ತಿರುತ್ತವೆ. ಏನೂ ಮಾಡಲು ಆಗುವುದಿಲ್ಲ ಎಂದು ಕತ್ತಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಚಾಮರಾಜನಗರ ತಾಲೂಕಿನ ಕೆ. ಗುಡಿಯಲ್ಲಿ ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಆಹಾರ ಮತ್ತು ಅರಣ್ಯ ಸಚಿವ ಉಮೇಶ್‌ ಕತ್ತಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ನಡೆಯಬಾರದು ನಿಜ. ಆದರೆ ನಡೆಯುತ್ತವೆ. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಹೆಚ್ಚು ಮಾತನಾಡಲು ನಾನು ಗೃಹ ಸಚಿವನಲ್ಲ ಎಂದರು.

ಮೈಸೂರು ಪ್ರಕರಣ,.. ನಾಯಕರ  ಅರ್ಥವಿಲ್ಲದ ಹೇಳಿಕೆಗಳು!

ಇಂಥವರಿಗೆ ಸಿಎಂ, ಕಟೀಲ್‌ ಬುದ್ದಿ ಹೇಳಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಡಾಟ್‌ ಕಾಂ ಕಳಕಳಿ

ಅತ್ಯಾಚಾರ ಪ್ರಕರಣಗಳ ಬಗ್ಗೆ ಸಚಿವರಾದ ಅರಗ ಜ್ಞಾನೇಂದ್ರ, ಉಮೇಶ್‌ ಕತ್ತಿ ಮೊದಲಾದವರು ಅಸೂಕ್ಷ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಅಸೂಕ್ಷ್ಮ ಹೇಳಿಕೆ ನೀಡುತ್ತಿರುವ ಸಚಿವರು, ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರು ಬುದ್ದಿ ಹೇಳಲಿ.
 

Latest Videos
Follow Us:
Download App:
  • android
  • ios