SSLC ಪರೀಕ್ಷೆ ಯಶಸ್ವಿ: ಇಂದು ಪೊಳಲಿ ದೇಗುಲಕ್ಕೆ ಸುರೇಶ್ ಕುಮಾರ್
ಪರೀಕ್ಷೆ ಕೊನೆಯಾದ ದಿನವೇ ಪರೀಕ್ಷೆಗಳ ಯಶಸ್ಸಿಗೆ ಶ್ರಮಿಸಿದ ಶಿಕ್ಷಣ ಇಲಾಖೆ ಸಹಿತ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು ಇದೀಗ ಪರೀಕ್ಷೆಯ ಯಶಸ್ಸಿನ ಹಿನ್ನಲೆಯಲ್ಲಿ ದೇವರ ದರ್ಶನಕ್ಕೆ ತೆರಳಲಿದ್ದಾರೆ.
ಬಂಟ್ವಾಳ(ಜು.10): ಭಾರಿ ವಿರೋಧಗಳ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಲಲಿತವಾಗಿ ನಡೆಸುವ ಮೂಲಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಗೆಲುವಿನ ನಗೆ ಬೀರಿದ್ದಾರೆ.
ಪರೀಕ್ಷೆ ಕೊನೆಯಾದ ದಿನವೇ ಪರೀಕ್ಷೆಗಳ ಯಶಸ್ಸಿಗೆ ಶ್ರಮಿಸಿದ ಶಿಕ್ಷಣ ಇಲಾಖೆ ಸಹಿತ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು ಇದೀಗ ಪರೀಕ್ಷೆಯ ಯಶಸ್ಸಿನ ಹಿನ್ನಲೆಯಲ್ಲಿ ದೇವರ ದರ್ಶನಕ್ಕೆ ತೆರಳಲಿದ್ದಾರೆ.
ದ್ವಿತೀಯ PUC ರಿಸಲ್ಟ್ ಬಗ್ಗೆ ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಮಹತ್ವದ ಮಾಹಿತಿ
ರಾಜ್ಯದಲ್ಲಿ ಕೈಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದರೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದಾಗಿ ಸುರೇಶ್ ಕುಮಾರ್ ಸಂಕಲ್ಪಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಪೊಳಲಿಗೆ ಖಾಸಗಿ ಭೇಟಿ ನೀಡಲಿದ್ದಾರೆ.
ಈ ಕುರಿತಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್‌್ಕ ‘ಕನ್ನಡಪ್ರಭ’ದ ಜೊತೆ ಮಾತನಾಡಿ, ಈ ಹಿಂದೆ ಸಚಿವರು ಪೊಳಲಿಗೆ ಭೇಟಿ ನೀಡಿದ್ದ ಸಂದರ್ಭ ಕ್ಷೇತ್ರದ ಶಕ್ತಿ ಬಗ್ಗೆ ತಿಳಿದುಕೊಂಡಿದ್ದರು. ಅದರಂತೆ ಈ ಬಾರಿಯ ಕೊರೋನಾ ಸಂಕಷ್ಟದ ಸಂದರ್ಭ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಿಘ್ನವಾಗಿ ನಡೆದರೆ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಬಗ್ಗೆ ಪ್ರಾರ್ಥಿಸಿದ್ದರು. ಅದರಂತೆ ಕ್ಷೇತ್ರಕ್ಕೆ ಶುಕ್ರವಾರ ಖಾಸಗಿ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!
ಬೆಳಗ್ಗೆ 11ಕ್ಕೆ ಬಂಟ್ವಾಳಕ್ಕೆ ಆಗಮಿಸಲಿರುವ ಸಚಿವರು 12 ಗಂಟೆಗೆ ಪೊಳಲಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ ಸಂದರ್ಭ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಯಶಸ್ವಿಗೆ ಬಂಟ್ವಾಳದಲ್ಲಿ ಶ್ರಮಿಸಿದವರಿಗೂ ಸಚಿವರು ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮವನ್ನೂ ಪೊಳಲಿಯಲ್ಲಿ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ.