ದ್ವಿತೀಯ PUC ರಿಸಲ್ಟ್ ಬಗ್ಗೆ ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಮಹತ್ವದ ಮಾಹಿತಿ
ದ್ವಿತೀಯ ಪಿಯುಸಿ ಪರೀಕ್ಷ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು, (ಜು.09) : ದ್ವಿತೀಯ ಪಿಯುಸಿ ಬಾಕಿ ಉಳಿದಿದ್ದ ಇಂಗ್ಲೀಷ್ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕೊರೋನಾ ಭೀತಿ ನಡುವೆಯೂ ಬರೆದಿದ್ದು, ಇದೀಗ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ರಿಸಲ್ಟ್ ಲೆಕ್ಕಾಚಾರದಲ್ಲಿದ್ದಾರೆ.
ಯಾವಾಗ ಫಲಿತಾಂಶ ಪ್ರಕಟವಾಗುತ್ತೆ ಎನ್ನುವ ಚಿಂತೆಯಲ್ಲಿದ್ದಾರೆ. ಇದರ ಮಧ್ಯೆ ರಿಸಲ್ಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದ, ಇದು ವಿದ್ಯಾರ್ಥಿಗಳನ್ನ ಮತ್ತಷ್ಟು ಗೊಂದಕ್ಕೀಡು ಮಾಡಿದೆ.
ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!
ಇದನ್ನ ಗಮನಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20 ರಂದು ಪ್ರಕಟಗೊಳ್ಳುತ್ತದೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇನ್ನು ಕೊರೋನಾ ಆತಂಕದ ನಡುವೆಯೂ ಪರೀಕ್ಷೆ ಬರೆದಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೂ ಸಮಯ ನಿಗದಿಪಡಿಸಲಾಗುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಸದ್ಯದಲ್ಲೇ ದಿನಾಂಕವನ್ನೂ ತಿಳಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಈಗಾಗಲೇ ಹೇಳಿದ್ದಾರೆ.