ವಿದ್ಯಾರ್ಥಿಯ ಕಷ್ಟ ಅರಿತು ಶೈಕ್ಷಣಿಕ ನೆರವಿಗೆ ಮುಂದಾದ ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ|  ವಿದ್ಯಾರ್ಥಿಯ ಮುಂದಿನ 3 ವರ್ಷಗಳಲ್ಲಿ 1.50 ಲಕ್ಷ ಆರ್ಥಿಕ ನೆರವು ನೀಡಲಿರುವ ಸುಧಾ ಮೂರ್ತಿ| ಪ್ರತಿವರ್ಷ 50 ಸಾವಿರದಂತೆ ಶೈಕ್ಷಣಿಕ ಖರ್ಚಿಗೆ ಈ ಹಣ ಸಂದಾಯ| 

ಬಾಗಲಕೋಟೆ(ಆ.28): ಬಡತನದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಯ ಕಷ್ಟ ಅರಿತು ಶೈಕ್ಷಣಿಕ ನೆರವಿಗೆ ಮುಂದಾದ ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಾಯದ ಗುಣವನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಖಾಜಿಬೀಳಗಿ ಗ್ರಾಮದ ವಿದ್ಯಾರ್ಥಿ ಸಂಜು ಬಿರಾದಾರ 625 ಅಂಕಕ್ಕೆ 617 ಅಂಕ ಪಡೆದು ರಾಜ್ಯಕ್ಕೆ 7ನೇ ರಾರ‍ಯಂಕ್‌ ಪಡೆದಿದ್ದರು. 

ಕೋವಿಡ್‌ ಸಂಕಷ್ಟಕ್ಕೆ ಮಿಡಿದ ಸುಧಾ ಮೂರ್ತಿ: ಧನ್ಯವಾದ ತಿಳಿಸಿದ ಸಚಿವ ಸುಧಾಕರ್‌

ಸಂಜು ಬಿರಾದಾರದು ತುಂಬಾ ಬಡತನದ ಕುಟುಂಬವಾಗಿತ್ತು. ಈ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಿದ್ದವು. ವಿದ್ಯಾರ್ಥಿಯ ಸಾಧನೆ ಗಮನಿಸಿ ಇಸ್ಫೋಸಿಸ್‌ನ ಸುಧಾಮೂರ್ತಿಯವರು ಶೈಕ್ಷಣಿಕ ಖರ್ಚು ಭರಿಸಲು ಮುಂದಾಗಿದ್ದು, ಮುಂದಿನ 3 ವರ್ಷಗಳಲ್ಲಿ 1.50 ಲಕ್ಷ ಆರ್ಥಿಕ ನೆರವನ್ನು ನೀಡಲಿದ್ದಾರೆ. ಪ್ರತಿವರ್ಷ 50 ಸಾವಿರದಂತೆ ಶೈಕ್ಷಣಿಕ ಖರ್ಚಿಗೆ ಈ ಹಣ ಸಂದಾಯವಾಗಲಿದೆ.