ಸಿದ್ದರಾಯಮ್ಯ ಸ್ಥಿತಿ ಕಂಡು ಅಯ್ಯೋ ಅನಿಸ್ತಿದೆ : ಸುಧಾಕರ್
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸ್ಥಿತಿ ಕಂಡು ಅಯ್ಯೋ ಎನಿಸುತ್ತಿದೆ ಎಂದು ನೂತನ ಸಚಿವ ಸುಧಾಕರ್ ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆಯೇ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಚಿಕ್ಕಬಳ್ಳಾಪುರ [ಫೆ.08]: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಥಿತಿ ಕಂಡು ಅಯ್ಯೋ ಅನ್ನಿಸುತ್ತಿದ್ದು, ಸುಪ್ರೀಂಕೋರ್ಟ್ ತೀರ್ಮಾನವನ್ನು ಅವರು ಪ್ರಶ್ನೆ ಮಾಡುತ್ತಾರೆ ಎನ್ನುವುದಾದರೆ ಅವರಿಗೆ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆಯೇ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಕೀಲರು, ಅವರು ಕಾನೂನನ್ನು ಅರ್ಥಮಾಡಿಕೊಳ್ಳಲಿದ್ದಾರೆ ಎಂದುಕೊಂಡಿರುವೆ. ಆದರೂ ಇಂತಹ ಹೇಳಿಕೆ ನೀಡುತ್ತಿರುವುದು ವಿಪರ್ಯಾಸ ಎಂದರು.
32 ವರ್ಷ ನಂತ್ರ ಚಿಕ್ಕಬಳ್ಳಾಪುರಕ್ಕೆ ಒಲಿದ ಸಚಿವ ಸ್ಥಾನ.
ಈ ಹಿಂದೆ ಕಾಂಗ್ರೆಸ್‌ನಲ್ಲಿ ನಮ್ಮ ನಾಯಕತ್ವ ಇದ್ದಾಗ ಅವರ ಬಗ್ಗೆ ಯಾರೇ ಮಾತಾಡಿದರೂ ಬಿಡುತ್ತಿರಲಿಲ್ಲ.
ಆದರೆ ಈಗಲಾದರೂ ಯಾರು ಹಿತವರು, ಯಾರು ಶತ್ರುಗಳು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಪ್ರಸ್ತುತ ನಾನು ಬಿಜೆಪಿಯಲ್ಲಿದ್ದು, ಕಾಂಗ್ರೆಸ್ ಕುರಿತ ಮಾತು ನಮಗೇಕೆ?. ನಮ್ಮ ಪಕ್ಷದ ಬಗ್ಗೆ ನಾವು ನೋಡಿಕೊಳ್ಳೋಣ ಎಂದು ಹೇಳಿದರು.