ಬೆಂಗಳೂರು(ಮೇ.29): ಇಂದು ಮೈಸೂರಿಗೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗಳ ಸಂಬಂಧ ಉದ್ಭವಿಸಿರುವ ಗೊಂದಲ ಬಗೆಹರಿಸಲು ಪ್ರಯತ್ನ ನಡೆಸುವೆ ಎಂದು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ. 

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ಬಂದು ಏಳೆಂಟು ತಿಂಗಳಾಗಿದೆ. ಈವರೆಗೆ ಅಷ್ಟಾಗಿ ಸಮಸ್ಯೆ ಕಂಡಿರಲಿಲ್ಲ ಎಂದಿದ್ದಾರೆ.

ತಾಕತ್ತಿದ್ರೆ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿಸು: ಪ್ರತಾಪ್ ಸಿಂಹಗೆ ಸವಾಲು

ನಾನು ಸಹ ಮುಂಚೆ ವಾರದಲ್ಲಿ ಮೂರು ದಿನ ಮೈಸೂರಿಗೆ ಭೇಟಿ ನೀಡಿ ನೋಡಿಕೊಳ್ಳುತ್ತಿದ್ದೆ. ಆದರೆ, ಈಗ ನನ್ನ ಕ್ಷೇತ್ರದಲ್ಲಿಯೇ ಕೊರೋನಾ ಉಲ್ಬಣವಾಗುತ್ತಿರುವ ಕಾರಣ, ವಾರದಲ್ಲಿ ಶನಿವಾರದಂದು ಮಾತ್ರ ಮೈಸೂರಿಗೆ ಭೇಟಿ ನೀಡುತ್ತಿದ್ದೇನೆ. ಇಂದು ಮೈಸೂರಿಗೆ ಹೋಗುತ್ತಿದ್ದೇನೆ. ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಹೇಳಿದ್ದಾರೆ.