ಡಿಕೆಶಿ ಹೆಸರು ಬಂದಿದ್ದು, ನನಗೆ ಅಚ್ಚರಿ ಅನಿಸಿಲ್ಲ| ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಇದು ಚರ್ಚೆಯಲ್ಲಿತ್ತು| ಇಡೀ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು ಟಾರ್ಗೆಟ್ ಆಗುತ್ತಿದ್ದಾರೆ| ಈ ಪ್ರಕರಣದ ಮಹಾನಾಯಕ ಯಾರು ಎಂಬ ಸತ್ಯಾಸತ್ಯತೆ ಹೊರಗೆ ಬರಲೇ ಬೇಕು: ಎಸ್.ಟಿ.ಸೋಮಶೇಖರ್| 

ಧಾರವಾಡ(ಮಾ.27): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಹೇಳು ಅಂತ ನಾವೇನಾದರು ಹೇಳಿದ್ದೇವಾ, ಆಕೆಯೇ ತಾನಾಗಿಯೇ ಆ ಹೆಸರು ಹೇಳಿದ್ದಾಳೆ. ಅಲ್ಲಿಗೆ ಈ ಹಿಂದೆಯೇ ಅವರು ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೆ ಸಂಬಂಧ ಇದೆ ಎನ್ನುವಂತಾಯಿತಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಮಹಾನಾಯಕನ ಪಾತ್ರ ಇದೆ ಎಂಬುದು ಚರ್ಚೆಯಲ್ಲಿದೆ. ಸಂತ್ರಸ್ತೆಯೇ ಅವರ ಹೆಸರು ಹೇಳಿದ್ದಾಳೆ. ನಾವೇನು ನೀವೂ ಹೇಳಿ ಎಂದು ಹೇಳಿದ್ದೇವಾ?. ಆತ ಯಾರು ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ನಮಗೂ ಕುತೂಹಲ ಇತ್ತು ಯಾರು ಅಂತ. ಡಿಕೆಶಿ ಮಹಾನಾಯಕನೆಂಬ ಪ್ರಶ್ನೆಗೆ ಈಗ ಅವರ ಹೆಸರು ಬಂದಿದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕೆಂದು ಬಾಳೆಹಣ್ಣು ಹರಕೆ..!

ಮಹಾನಾಯಕ ಯಾರು ಅಂತ ಸದ್ಯದಲ್ಲೇ ಗೊತ್ತಾಗಲಿದೆ. ಡಿಕೆಶಿ ಹೆಸರು ಬಂದಿದ್ದು, ನನಗೆ ಅಚ್ಚರಿ ಅನಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಇದು ಚರ್ಚೆಯಲ್ಲಿತ್ತು. ಇಡೀ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾಗಿ ಈ ಪ್ರಕರಣದ ಮಹಾನಾಯಕ ಯಾರು ಎಂಬ ಸತ್ಯಾಸತ್ಯತೆ ಹೊರಗೆ ಬರಲೇ ಬೇಕು ಎಂದು ಹೇಳಿದ್ದಾರೆ.

ಸಂತ್ರಸ್ತ ಯುವತಿ ಎಲ್ಲಿಯೇ ಬಂದು ಹೇಳಿಕೆ‌ ನೀಡಿದರೂ ಆಕೆಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಬದ್ಧವಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

"