ಗದಗ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಮನವಿಗೆ ಸಚಿವ ರಾಮುಲು ಸ್ಪಂದನೆ
ಜನವರಿ 9ರಿಂದಲೇ ಬೆಂಗಳೂರಿನಿಂದ ವೊಲ್ವೋ ಬಸ್ ಸೇವೆ ಆರಂಭಿಸುವುದಾಗಿ ತಿಳಿಸಿದ ರಾಮುಲು, ಬೆಂಗಳೂರು ನಗರದಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭ ಮಾಡುವುದಾಗಿ ಹೇಳಿದ್ದಾರೆ.
ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ(ಜ.07): ನಗರಕ್ಕೆ ವೋಲ್ವೊ ಬಸ್ ಸರ್ವಿಸ್ ಬೇಕು ಅಂತ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಟ್ವೀಟ್ ಮಾಡಿ ಸುನಿಲ್ ಜೋಶಿ ಮನವಿ ಮಾಡಿದ್ರು. ಜೋಶಿ ಮನವಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಂದಿಸಿದ್ದಾರೆ. ಜನವರಿ 9ರಿಂದಲೇ ಬೆಂಗಳೂರಿನಿಂದ ವೊಲ್ವೋ ಬಸ್ ಸೇವೆ ಆರಂಭಿಸುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮುಲು, ಬೆಂಗಳೂರು ನಗರದಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭ ಮಾಡುವುದಾಗಿ ಹೇಳಿದ್ದಾರೆ.
ನಾವು ಜನರ ಸೇವೆಗಾಗಿಯೇ ಇದ್ದೇವೆ. ಜನವರಿ 9ರ ಸೋಮವಾರದಿಂದಲೇ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭಿಸಲಿದೆ. ಗದಗ ಪುಟ್ಟರಾಜ ಗವಾಯಿಗಳ ಪುಣ್ಯಭೂಮಿ. ನನ್ನ ಹೃದಯಕ್ಕೆ ಹತ್ತಿರವಾದ ಜನರಿಗಾಗಿ ಬಸ್ ಸೇವೆ ಆರಂಭಿಸಲಾಗುತ್ತದೆ ಎಂದು ಟ್ವೀಟ್‌ನಲ್ಲಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ.
ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಪಕ್ಷ ಬಿಜೆಪಿ : ಡಾ. ಚಂದ್ರು ಲಮಾಣಿ
ಬಿ. ಶ್ರೀರಾಮುಲು ಹಿಂದೆ ಗದಗ ಜಿಲ್ಲಾ ಉಸ್ತುವಾರಿಯಾಗಿದ್ದರು. ಜಿಲ್ಲೆಯ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇದೆ.. ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಮೂಲತಃ ಗದಗದವರು. ನಗರದ ವಿಡಿಎಸ್ಟಿ ಹೈಸ್ಕೂಲ್‌ನಲ್ಲಿ ಓದಿದ ಅವರು, ಎಎಸ್ಎಸ್ ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದವರು. ಕ್ರಿಕೆಟ್ ರಂಗದ ಹಲವು ಹಂತಗಳನ್ನು ದಾಟಿ ಬಿಸಿಸಿಐನ ಆಯ್ಕೆ ಸಮಿತಿಯ ಮುಖ್ಯಸ್ಥರು ಆಗಿದ್ದ ಜೋಶಿ ಅವರ ಕ್ರಿಕೆಟ್ ಅಭ್ಯಾಸ ಆರಂಭವಾಗಿದ್ದೂ ಗದಗನಲ್ಲೇ ಎಂಬುದು ವಿಶೇಷ. ಕೆಲವು ದಿನಗಳ ಕಾಲ ಅಭ್ಯಾಸಕ್ಕಾಗಿ ಪ್ರತಿದಿನ ಬೆಳಗ್ಗೆ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು.
ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಸುನಿಲ್ ಜೋಶಿ, ಬಸ್ ವ್ಯವಸ್ಥೆ ಮಾಡುವಂತೆ ಟ್ವೀಟ್ ಮಾಡಿದ್ದರು. ನನ್ನ ವಿನಯ ಪೂರ್ವಕ ಮನವಿ ಬೆಂಗಳೂರಿನಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭವಾಗಬೇಕು. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ ಎಂದಿದ್ದರು, ಜೋಶಿ ಸ್ವೀಟ್ ಗೆ ಈಗ ಸ್ಪಂದನೆ ಸಿಕ್ಕಿದೆ.