Koppal; ಭಾರೀ ವಿವಾದದಲ್ಲಿ ಸಚಿವ Sriramulu ಜೀರ್ಣೋದ್ಧಾರ ಮಾಡುತ್ತಿರುವ ದೇವಾಲಯ
ಕೊಪ್ಪಳದಲ್ಲಿ ಜೀರ್ಣೋದ್ಧಾರ ನೆಪದಲ್ಲಿ ದೇವಿಯೊಂದರ ಮೂರ್ತಿಯನ್ನು ಕಿತ್ತು ಹಾಕಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇವಾಲಯದ ಜೀರ್ಣೋದ್ಧಾರವನ್ನು ಸಚಿವ ಬಿ ಶ್ರೀರಾಮುಲು ಕೈಗೊಂಡಿದ್ದಾರೆ.
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಮೇ.27): ಅದೊಂದು ಪುರಾಣ ಪ್ರಸಿದ್ಧ ಸ್ಥಳ. ಆ ಸ್ಥಳದಲ್ಲಿ ಸಚಿವರೊಬ್ಬರು ಜೀರ್ಣೋದ್ಧಾರ ಕೈಗೊಂಡಿದ್ದು, ಜೀರ್ಣೋದ್ಧಾರ ನೆಪದಲ್ಲಿ ದೇವಿಯೊಂದರ ಮೂರ್ತಿಯನ್ನು ಕಿತ್ತು ಹಾಕಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಆನೆಗೊಂದಿ ಭಾಗ ಎಂದರೆ ಸಾಕು ನಮಗೆ ತಟ್ಟನೆ ನೆನಪಾಗುವುದು ಆಂಜನೇಯ ಜನ್ಮಸ್ಥಳ ಆನೆಗೊಂದಿ. ಕೊಪ್ಪಳ (Koppal) ಜಿಲ್ಲೆಯ ಆನೆಗುಂದಿಯ (Anegundi ) ಭಾಗ ಪೌರಾಣಿಕವಾಗಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿರುವ ಪ್ರದೇಶ. ಇಂತಹ ಪ್ರದೇಶದ ಭಾಗದಲ್ಲಿರುವ ಪಂಪಾ ಸರೋವರ ಹಾಗೂ ಅದರ ಆವರಣದಲ್ಲಿರುವ ವಿವಿಧ ದೇವಾಲಯಗಳನ್ನು (Temple) ಸಚಿವ ಬಿ ಶ್ರೀರಾಮುಲು (B Sriramulu) ವೈಯಕ್ತಿಕವಾಗಿ ಜಿರ್ಣೋದ್ಧಾರ ಮಾಡುತ್ತಿದ್ದಾರೆ.
ಆದರೆ ಇದೀಗ ಈ ಜೀರ್ಣೋದ್ಧಾರ (Rejuvenation) ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮುಂಚೆ ಇದ್ದ ಜಯಲಕ್ಷ್ಮೀ ದೇವಸ್ಥಾನದಲ್ಲಿನ ವಿಗ್ರಹವನ್ನು ಸಂಪೂರ್ಣವಾಗಿ ಕಿತ್ತು ಹಾಕಿ ಜಯಲಕ್ಷ್ಮೀ ದೇವತೆಯ ಮೂರ್ತಿ ಪ್ರತಿಷ್ಠಾಪಿಸಿದ ಗರ್ಭಗುಡಿಯ ಪಾಣಿ ಬಟ್ಲು ಕಿತ್ತು ದೇವತೆಯ ಮೂರ್ತಿಯನ್ನು ಈಶ್ವರನ ಗುಡಿಯಲ್ಲಿಡಲಾಗಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಿವೃತ್ತಿಗೆ ಕೇವಲ 1 ದಿನ ಬಾಕಿ ಇರುವಾಗಲೇ ಎಸಿಬಿ ಬಲೆಗೆ ಬಿದ್ದ MUDA ಅಧಿಕಾರಿ
ಸ್ಥಳೀಯರ ಆಕ್ರೋಶಕ್ಕೆ ಕಾರಣವೇನು?
ಇನ್ನು ಸಚಿವ ಬಿ ಶ್ರೀರಾಮುಲು ಮೈಸೂರಿನಲ್ಲಿರುವ ರಾಜ್ಯ ಪುರಾತತ್ವ ಇಲಾಖೆ (karnataka archaeological department) ಕಮೀಷನರ್ ಅವರಿಂದ ಪಂಪಾಸರೋವರ ಜೀರ್ಣೋದ್ಧಾರಕ್ಕೆ ಪರವಾನಿಗೆ ಪಡೆದಿದ್ದಾರೆ. ಪರವಾನಿಗೆ ಪಡೆಯುವ ವೇಳೆಯಲ್ಲಿ ಜೀರ್ಣೋದ್ಧಾರ ಮಾಡಲು ದೇವಸ್ಥಾನಗಳು ಸೇರಿದಂತೆ ಯಾವುದಸೆ ಕಟ್ಟಡಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಷರತ್ತಿನ ಅನ್ವಯ ಪರವಾನಿಗೆ ಪಡೆದಿದ್ದಾರೆ.ಆದರೆ ಇದೀಗ ಜಯಲಕ್ಷ್ಮೀ ದೇಗುಲದ ಗರ್ಭ ಗುಡಿ ಕಿತ್ತು ಶ್ರೀಚಕ್ರ ಹಾಗೂ ದೇವತೆ ಮೂರ್ತಿ ಬೇರೆಡೆ ಇಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರ ಆಕ್ರೋಶಕ್ಕೆ ಮಣೆದು ಸ್ಥಳಕ್ಕೆ ಬಂದ ಶಾಸಕ, ತಹಶೀಲ್ದಾರ್
ಇನ್ನು ಜಯಲಕ್ಷ್ಮೀ ದೇವಸ್ಥಾನ ಜಿರ್ಣೋದ್ಧಾರದ ಸಮಯದ ವೇಳೆ ದೇವರ ಮೂರ್ತಿಗೆ ಧಕ್ಕೆಯಾಗಿರುವ ವಿಷಯ ತಿಳಿಯುತ್ತಲೇ ಪಂಪಾ ಸರೋವರಕ್ಕೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಸ್ಥಳೀಯರು ಆಗಮಿಸಿದರು. ಬಳಿಕ ಶಾಸಕ ಪರಣ್ಣ ಮುನವಳ್ಳಿ,ತಹಶೀಲ್ದಾರ ಯು ನಾಗರಾಜ ಆಗಮಿಸಿದರು. ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿ, ಯಾರೋ ಬಂದು ಇಷ್ಟೆಲ್ಲ ಮಾಡಿದ್ರೂ ಕೈ ಕಟ್ಟಿ ಕುಳಿತಿದ್ದೀರಿ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳು,ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಎಫ್ ಐ ಆರ್ ದಾಖಲು ಮಾಡಿವಂತೆ ಸೂಚಿಸಿದರು.
Chitradurgaದ ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ
ಅಭಿವೃದ್ಧಿ ಹೆಸರಿನಲ್ಲಿ ನಿಧಿ ತೆಗೆಯವ ಶಂಕೆ
ಇನ್ನು ಪೌರಾಣಿಕ ಹಿನ್ನೆಲೆಯುಳ್ಳ ಪಂಪಾಸರೋವರದ ಜಯಲಕ್ಷ್ಮೀ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ಕಾಲದ ದೇವಾಲಯವಾಗಿದೆ. ಹೀಗಾಗಿ ದೇಗುಲದ ಗರ್ಭಗುಡಿ ದೇವತೆಯ ಮೂರ್ತಿ ತೆಗೆದು ಪಾಣಿ ಬಟ್ಲು ಬದಿಗೆ ಸರಿಸಿರುವುದು ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎನ್ನಲಾಗಿದೆ. ಜೊತೆಗೆ ನಿಧಿ ಆಸೆಗಾಗಿಯೂ ಜಯಲಕ್ಷ್ಮೀ ವಿಗ್ರಹವನ್ನು ಕಿತ್ತಿದ್ದಾರೆ ಎನ್ನುವ ಆರೋಪಗಳನ್ನು ಸಹ ಕೇಳಿಬಂದಿವೆ.
ಮಧ್ಯ ರಾತ್ರಿ ಮೂಲ ವಿಗೃಹ ತೆರವು ಮಾಡಿದ್ದೇಕೆ ಎಂದು ಸಾರ್ವಜನಿಕರ ಪ್ರಶ್ನೆ ಮಾಡುತ್ತಿದ್ದು, ಸಮಗ್ರ ತನಿಖೆಗೆ ಮಾಡಬೇಕೆಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಂಪಿ ಪ್ರಾಧಿಕಾರ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.