ಬೆಂಗಳೂರು (ಆ.14) : ಗೋಲಿಬಾರ್‌ನಿಂದ ಸತ್ತವರ ಬಡತನದ ಬಗ್ಗೆ ಕಾಂಗ್ರೆಸ್‌ ನಾಯಕ ಜಮೀರ್‌ ಅಹಮದ್‌ ನೀಡಿರುವ ಹೇಳಿಕೆಯನ್ನು ಗೃಹ ಸಚಿವ ಎಸ್ ಆರ್ ಬೊಮ್ಮಾಯಿ ಖಂಡಿಸಿದ್ದಾರೆ.

"

ಜಮೀರ್‌ ಆಹ್ಮದ್‌ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅವರ ಹೇಳಿಕೆಗಳಿಗೇ ಅವರೇ ಜವಾಬ್ದಾರರು. ಇಂತಹ ಸಂದರ್ಭದಲ್ಲಿ ಯಾರೊಬ್ಬರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು. 

ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್‌ನಲ್ಲಿ ಸತ್ತವರ ಅಂತ್ಯಕ್ರಿಯೆಲ್ಲಿ ಜಮೀರ್ ಭಾಗಿ..

ಹಾಗೆಯೇ ಸುಪ್ರೀಂಕೋರ್ಟ್‌ ನ ಮಾರ್ಗಸೂಚಿಯಂತೆ ಗಲಭೆಕೋರರಿಂದಲೇ ನಷ್ಟವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪುನರುಚ್ಚರಿಸಿದರು. ಗಲಭೆ ನಡೆದಿದ್ದ ಪ್ರದೇಶಗಳಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.