ಶಶಿಕಲಾ ಜೊಲ್ಲೆ ಮತ್ತೊಂದು ವಿವಾದ : ನಿಯಮ ಮರೆತ ಸಚಿವೆ
- ಜನಸಾಮಾನ್ಯರಿಗೆ ಒಂದು ರೂಲ್ಸ್... ಜನಪ್ರತಿನಿಧಿಗಳಿಗೆ ಒಂದು ರೂಲ್ಸ್..
- ಶಶಿಕಲಾ ಜೊಲ್ಲೆ ಗುರುವಾರ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದಿದ್ದು, ಕೊರೋನಾ ರೂಲ್ಸ್‌ಗಳನ್ನು ಮರೆತು ದೇವಾಲಯಕ್ಕೆ ತೆರಳಿದ್ದಾರೆ.
ಬೆಳಗಾವಿ (ಅ.15): ಜನಸಾಮಾನ್ಯರಿಗೆ ಒಂದು ರೂಲ್ಸ್ (Rule)... ಜನಪ್ರತಿನಿಧಿಗಳಿಗೆ ಒಂದು ರೂಲ್ಸ್..? ಎನ್ನುವಂತಾಗಿದೆ ಇಲ್ಲಿನ ಸ್ಥಿತಿಗತಿ.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಗುರುವಾರ ಸವದತ್ತಿ ಯಲ್ಲಮ್ಮದೇವಿ (Savadatti Temple) ದರ್ಶನ ಪಡೆದಿದ್ದು, ಕೊರೋನಾ (Corona) ರೂಲ್ಸ್‌ಗಳನ್ನು ಮರೆತು ದೇವಾಲಯಕ್ಕೆ ತೆರಳಿದ್ದಾರೆ.
ಬೆಳಗಾವಿ(Belagavi) ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ದೇಗುಲಕ್ಕೆ ತೆರಳಿದ್ದ ಶಶಿಕಲಾ ಜೊಲ್ಲೆ ಮಾಸ್ಕ್ (Mask) ಧರಿಸದೇ ಸಾಮಾಜಿಕ ಅಂತರ (Social Distance) ಕಾಯ್ದುಕೊಳ್ಳದೇ ದೇವಿಯ ದರ್ಶನ ಪಡೆದಿದ್ದಾರೆ.
ಮಾಸ್ಕ್ ಇಲ್ಲದೇ ದೇವಸ್ಥಾನಕ್ಕೆ ಭಕ್ತರ (Devotees) ಪ್ರವೇಶಕ್ಕೆ ಇಲ್ಲಿ ಅನುಮತಿ ಇಲ್ಲ. ಆದರೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ ಆಗಿದೆ.
ಸಚಿವೆ ಶಶಿಕಲಾ ಜೊಲ್ಲೆ ಪತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ (Anna saheb Jolle) ಕೂಡ ಇವರಿಗೆ ಸಾಥ್ ನೀಡಿದ್ದು, ಈ ವೇಳೆ ಯಾವುದೆ ಕೊರೋನಾ ನಿಯಮಗಳನ್ನು ಪಾಲಿಸಿಲ್ಲ.
ಸ್ಥಳೀಯ ಶಾಸಕ ಆನಂದ ಮಾಮನಿ (Anand mamani) ಹಾಗು ಜೊಲ್ಲೆ ದಂಪತಿಗೆ ಇಲ್ಲಿ ಸನ್ಮಾನವನ್ನು ಮಾಡಲಾಗಿದ್ದು ಈ ವೇಳೆ ಸಂಪೂರ್ಣವಾಗಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಲಾಗಿದೆ.
ಸಾಮಾನ್ಯರಿಗೆ ತಿಳಿ ಹೇಳಬೇಕದಾ ಜನಪ್ರತಿನಿಧಿಗಳೇ ಈ ರೀತಿ ರೂಲ್ಸ್ ಬ್ರೇಕ್ ಮಾಡಿದರೆ ಇನ್ನು ಸಾಮಾನ್ಯರು ಹೇಗೆ. ಅಲ್ಲದೇ ದೇಗುಲದಲ್ಲಿ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ ಎನ್ನುವ ಪ್ರಶ್ನೆ ಮೂಡಿದೆ.
ಹಿಂದೆ ಅನೇಕ ಮುಖಂಡರಿಂದ ರೂಲ್ಸ್ ಬ್ರೇಕ್
ಜನರಿಗೆ ತಿಳಿ ಹೇಳಬೇಕಾದ ಶಾಸಕರೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ನಡೆದಿತ್ತು. ಮೆರವಣಿಗೆ ಮೂಲಕ ಮನೆಗೆ ಗಣೇಶನನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರೇ ಬ್ಯಾಂಡ್ ಬಾಜ ಹಾಕಿಕೊಂಡು ರಸ್ತೆಯುದ್ದಕ್ಕೂ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಸ್ವತಃ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯವರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ ಆಗಿತ್ತು.
ರಾಜಕೀಯವಾಗಿ ಕೊರೋನಾ ಬಳಸಲು ಕಾಂಗ್ರೆಸ್ ಹುನ್ನಾರ: ವಿರೂಪಾಕ್ಷಪ್ಪ ಬಳ್ಳಾರಿ
ಮೆರವಣಿಗೆ ಮೂಲಕ ಮನೆಗೆ ಗಣೇಶನನ್ನು ತೆಗೆದುಕೊಂಡು ಹೋಗುವ ವೇಳೆ ಶಾಸಕರ ಬೆಂಬಲಿಗರು ಮನಬಂದಂತೆ ರಸ್ತೆಯಲ್ಲಿ ಪಟಾಕಿ ಹೊಡೆದಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ಗಮನಿಸದೆಯೂ ಪಟಾಕಿ ಸಿಡಿಸಿದ್ದಾರೆ. ಸರಳ ಆಚರಣೆ ಬಿಟ್ಟು ಅದ್ಧೂರಿ ಆಚರಣೆಗೆ ಶಾಸಕರು ಮತ್ತು ಬೆಂಬಲಿಗರು ಮುಂದಾಗಿದ್ದಾರೆ. ಶಾಸಕರ ನಡೆ ಪ್ರಜ್ಞಾವಂತ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.
ಗಣೇಶೋತ್ಸವವನ್ನ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿಯಮಗಳನ್ನ ನೀಡಿದೆ. ಆದರೆ ಅದ್ಧೂರಿ ಮೆರವಣಿಗೆ ಬೇಡ ಎಂದು ಹೇಳಬೇಕಾದ ಶಾಸಕರಿಂದಲೇ ಉದ್ಧಟತನ ಮೆರೆದಿದ್ದರು.
ಇದೀಗ ಶಶಿಕಲಾ ಜೊಲ್ಲೆ ಅವರ ನಡೆಯು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.