Asianet Suvarna News Asianet Suvarna News

ಬಿಜೆಪಿಯವ್ರು ಇಲ್ದೆ ಚೈತ್ರಾರಿಂದ ಇಂತಹ ಕೆಲಸ ನಡೆಯಲ್ಲ: ಸಚಿವ ತಿಮ್ಮಾಪುರ

ಒಂದು ಪಕ್ಷದಲ್ಲಿದ್ದುಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೆಲಸ ನಡೆಯುತ್ತಿದೆ. ಇದು ದುರದೃಷ್ಟಕರ. ಮುಧೋಳದ ಹುಡುಗ ಕಾರು ಇಟ್ಕೊಂಡಿದ್ದು ನೋವಾಗಿದೆ. ಇಂತಹ ಕೆಲಸದಲ್ಲಿ ಯಾರೇ ಇರಲಿ ಪೊಲೀಸರು ಪತ್ತೆ ಹಚ್ಚುತ್ತಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ: ಸಚಿವ ಆರ್.ಬಿ. ತಿಮ್ಮಾಪುರ

Minister RB Timmapur Talks Over Chaitra Kundapura BJP Ticket Deal Case grg
Author
First Published Sep 19, 2023, 9:12 PM IST

ಬಾಗಲಕೋಟೆ(ಸೆ.19):  ಬಿಜೆಪಿಯವ್ರ ಅಟ್ಯಾಚ್‌ಮೆಂಟ್ ಇಲ್ಲದೇನೆ ಚೈತ್ರಾ ಕುಂದಾಪುರ ಅವರಂತಹವರಿಂದ ಇಂತಹ ಕೆಲಸ ನಡೆಯಲ್ಲ ಎಂದಿರುವ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಈ ಜಾಲ ಬಹುಶಃ ಎಲ್ಲೆಲ್ಲಿ ಹರಡಿದಿಯೋ ಗೊತ್ತಿಲ್ಲ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳದಲ್ಲಿ ಚೈತ್ರಾ ಕುಂದಾಪುರ ಅವರ ಕಾರು ಜಪ್ತಿಯಾಗಿರುವುದನ್ನು ಸಹ ಪ್ರಸ್ತಾಪಿಸಿದರು.

ಒಂದು ಪಕ್ಷದಲ್ಲಿದ್ದುಕೊಂಡು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಕೆಲಸ ನಡೆಯುತ್ತಿದೆ. ಇದು ದುರದೃಷ್ಟಕರ. ಮುಧೋಳದ ಹುಡುಗ ಕಾರು ಇಟ್ಕೊಂಡಿದ್ದು ನೋವಾಗಿದೆ. ಇಂತಹ ಕೆಲಸದಲ್ಲಿ ಯಾರೇ ಇರಲಿ ಪೊಲೀಸರು ಪತ್ತೆ ಹಚ್ಚುತ್ತಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಚೈತ್ರಾ ಕುಂದಾಪುರ ಗ್ಯಾಂಗ್‌ ಅಭಿನವ ಹಾಲಶ್ರೀಗೆ ವಿಐಪಿ ಸತ್ಕಾರ! ಏನಿದು ಸಿಸಿಬಿ ಪೊಲೀಸರ ಕಣ್ಣಾಮುಚ್ಚಾಲೆ?

ಚೈತ್ರಾ ಮೇಡಂ ಬಹುಶಃ ರಾಷ್ಟ್ರ ವ್ಯಾಪಿ ಓಡಾಡುತ್ತಿದ್ದರು ಅನಿಸುತ್ತೆ. ಇವರ ಹಿಂದೆ ಬಿಜೆಪಿಯ ಹಿರಿಯ ಮುಖಂಡ ಇರಬೇಕು. ಅವರನ್ನ ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದು ತಿಮ್ಮಾಪೂರ ಆಗ್ರಹಿಸಿದರು.

Follow Us:
Download App:
  • android
  • ios