Asianet Suvarna News Asianet Suvarna News

ಸರ್ಕಾರಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ ಸಚಿವ

ಕೊರೋನಾ ಸೋಂಕು‌ ತಡೆಗಟ್ಟಲು ಗೋಕಾಕ್ ತಾಲೂಕಿನಲ್ಲಿ ಲಾಕ್‌ಡೌನ್‌| ಗೋಕಾಕ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಘೋಷಣೆ| ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ  ಗೋಕಾಕ್‌ನಲ್ಲಿ ಸ್ಟ್ರಿಕ್ಟ್ ಲಾಕ್‌ಡೌನ್ ಜಾರಿ|

Minister Ramesh Jarakiholi Says One Week Lockdown in Gokak in Belagavi district
Author
Bengaluru, First Published Jul 12, 2020, 2:36 PM IST

ಬೆಳಗಾವಿ(ಜು.12): ಬೆಂಗಳೂರು ಮಾದರಿಯಲ್ಲಿ ಜಿಲ್ಲೆಯ ಗೋಕಾಕ್‌ ತಾಲೂಕಿನಲ್ಲಿ 7 ರಿಂದ 10 ದಿನ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅವರು ಹೇಳಿದ್ದಾರೆ. 

"

ಇಂದು(ಭಾನುವಾರ) ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಡೇ ಲಾಕ್‌ಡೌನ್ ಮಧ್ಯೆ ಸಚಿವರಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್‌ ತಾಲೂಕಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗುವುದು. ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ  ಗೋಕಾಕ್‌ನಲ್ಲಿ ಸ್ಟ್ರಿಕ್ಟ್ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಬ್ರೇಕಿಂಗ್:  ಒಂದು ವಾರ ಬೆಂಗಳೂರು ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ಗೋಕಾಕ್ ನಗರದ ಜನರು ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ ಮಾಡಲು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಲಾಕ್‌ಡೌನ್ ವೇಳೆ ಹಾಲು, ತರಕಾರಿ ಅಗತ್ಯ ಸೇವೆಗಳು ಮಾತ್ರ ಪೂರೈಕೆ ಮಾಡುತ್ತೇವೆ. ಅಧಿಕಾರಿಗಳ ಸಮಿತಿ ಮಾಡಿ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. 
 

Follow Us:
Download App:
  • android
  • ios