ಮಧುಗಿರಿ: ಸರ್ಕಾರಿ ಆಸ್ಪತ್ರೆಗೆ ಸಚಿವ ರಾಜಣ್ಣ ದಿಢೀರ್ ಭೇಟಿ
ಡಯಾಲಿಸೀಸ್ ಕೇಂದ್ರ, ವಾರ್ಡ್‌ಗಳು ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ವಿರುದ್ಧ ಕಿಡಿಕಾರಿದರು. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಬರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಬೇಕು. ಆ ನಿಟ್ಟಿನಲ್ಲಿ ನೋಡಿಕೊಳ್ಳುವಂತೆ ಸೂಕ್ತ ಸಲಹೆ ನೀಡಿ, ಸ್ವಚ್ಛತೆ ಕಾಪಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಸರಿಯಲ್ಲ ಎಂದ ಸಚಿವ ಕೆ.ಎನ್.ರಾಜಣ್ಣ
ಮಧುಗಿರಿ(ಆ.05): ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಡಳಿತ ವೈದ್ಯಾಧಿಕಾರಿ ಮಹೇಶ್ ಸಿಂಗ್ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡು ತರಾಟೆಗೆ ತೆಗೆದುಕೊಂಡರು.
ನಂತರ ಡಯಾಲಿಸೀಸ್ ಕೇಂದ್ರ, ವಾರ್ಡ್‌ಗಳು ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ವಿರುದ್ಧ ಕಿಡಿಕಾರಿದರು. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಬರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಬೇಕು. ಆ ನಿಟ್ಟಿನಲ್ಲಿ ನೋಡಿಕೊಳ್ಳುವಂತೆ ಸೂಕ್ತ ಸಲಹೆ ನೀಡಿ, ಸ್ವಚ್ಛತೆ ಕಾಪಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಸರಿಯಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ
ರಾತ್ರಿ ವೇಳೆ ಆಸ್ಪತ್ರೆ ಮುಂಭಾಗ ಮತ್ತು ಕಾಂಪೌಂಡ್ ಒಳ ಭಾಗದ ಆಸ್ಪತ್ರೆ ಸುತ್ತ ವಿದ್ಯುತ್ ದೀಪಗಳು ಉರಿಯುವುದಿಲ್ಲ. ಕೆಲ ವೈದ್ಯರು ಬೇಕಾಬಿಟ್ಟಿ ವರ್ತಿಸುತ್ತಾರೆ ಎಂದು ನಾಗರಿಕರು ಸಚಿವರ ಗಮನಕ್ಕೆ ತಂದಾಗ, ಆಸ್ಪತ್ರೆಯಲ್ಲಿ ಬೆಳೆದು ನಿಂತಿರುವ ಗಿಡಮರಗಳಿಂದ ಉದುರುವ ಕಸ ಕಡ್ಡಿಯನ್ನು ಎತ್ತಿ ಸ್ವಚ್ಛಮಾಡಬೇಕು. ಪೆಟ್ಟಿಗೆ ಅಂಗಡಿಗಳನ್ನು ಎತ್ತಿಸಿ, ಆಸ್ಪತ್ರೆ ಕಾಂಪೌಂಡ್ ಹೊರಗೆ ಮತ್ತು ಒಳಾಂಗಣದಲ್ಲಿ ಸಂಜೆ ಆದರೆ ವಿದ್ಯುತ್ ದೀಪಗಳು ಉರಿಯಬೇಕು. ಬರುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಪ್ರೀತಿಯಿಂದ ಕಂಡು ಉಪಚರಿಸಬೇಕು ಎಂದು ವೈದ್ಯಾಧಿಕಾರಿಗೆ ತಾಕೀತು ಮಾಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್‌ಬಾಬು, ಡಾ.ಗಂಗಾಧರ್, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಡಿವೈಎಸ್‌ಪಿ ವೆಂಕಟೇಶ್‌ನಾಯುಡು, ಸಿಪಿಐ ಹನುಮಂತರಾಯಪ್ಪ ಸೇರಿದಂತೆ ಅನೇಕರಿದ್ದರು.