ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೂ ಸ್ಪಂದಿಸುತ್ತಿದ್ದೇನೆ: ಸಚಿವ ಅಶೋಕ್

ಚಿಕ್ಕಮಗಳೂರಿಗೆ ಬಂದ ಸಂದರ್ಭದಲ್ಲಿ ಬೆಳೆಗಾರರಿಗೆ ನೀಡಿದ್ದ ಭರವಸೆಯನ್ನು ಅಧ್ಯಕ್ಷರ ಗಮನಕ್ಕೆ ತಂದು ವಸ್ತುಸ್ಥಿತಿ ವಿವರಿಸಿದಾಗ ಆ ಕ್ಷಣದಲ್ಲಿ ಕಡತ ಪಡೆದು ಅರ್ಧ ಗಂಟೆ ಒಳಗೆ ರೂಪುರೇಷೆ ನಿರ್ಧರಿಸಲಾಯಿತು: ಸಚಿವ ಅಶೋಕ್  

Minister R Ashok Talks Over Coffee Growers Problems in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.05):  ಕಾಫಿ ಕೃಷಿಗೆ ಒತ್ತುವರಿ ಮಾಡಿದ ಭೂಮಿಯನ್ನು ಗುತ್ತಿಗೆಗೆ ನೀಡುವ ಕಾಯ್ದೆ ಪಾಸ್ ಮಾಡುವಲ್ಲಿ ಸದನದ “ಗೆರೆ” ದಾಟಿದ ರಹಸ್ಯಗಳನ್ನು ಕಂದಾಯ ಸಚಿವ ಆರ್ .ಅಶೋಕ್ ಬಿಟ್ಟಿದ್ದಾರೆ. ಚಿಕ್ಕಮಗಳೂರು ನಗರದ ಎ.ಐ.ಟಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ ಕೃತಜ್ಞತಾ ಪೂರ್ವಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಲನ್ ಆಗುವ ಭಯ ಇದ್ದರೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಸಾಮಾನ್ಯವಾಗಿ ಯಾವುದೇ ಬಿಲ್ಲನ್ನು ಸದನದಲ್ಲಿ ಮಂಡಿಸಬೇಕಾದರೆ ಮೊದಲು ಸಭಾಧ್ಯಕ್ಷರ ಗಮನಕ್ಕೆ ಸಾಕಷ್ಟು ದಿನಗಳ ಮೊದಲೇ ತರಬೇಕು, ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮುಂದೆ ಕಡತ ಇಟ್ಟಾಗ ಮೊದಲು ತಿರಸ್ಕೃತವಾಗಿತ್ತು ಎಂದು ಹೇಳಿದರು.

ಚಿಕ್ಕಮಗಳೂರಿಗೆ ಬಂದ ಸಂದರ್ಭದಲ್ಲಿ ಬೆಳೆಗಾರರಿಗೆ ನೀಡಿದ್ದ ಭರವಸೆಯನ್ನು ಅಧ್ಯಕ್ಷರ ಗಮನಕ್ಕೆ ತಂದು ವಸ್ತುಸ್ಥಿತಿ ವಿವರಿಸಿದಾಗ ಆ ಕ್ಷಣದಲ್ಲಿ ಕಡತ ಪಡೆದು ಅರ್ಧ ಗಂಟೆ ಒಳಗೆ ರೂಪುರೇಷೆ ನಿರ್ಧರಿಸಲಾಯಿತು ಎಂದರು.

ಮುತಾಲಿಕ್‌ಗೆ ಬೆಂಬಲ ನೀಡಿ, ಚಿಕ್ಕಮಗಳೂರು ಶ್ರೀರಾಮಸೇನೆ ಸಂಘಟನೆಯಿಂದ ಬಿಜೆಪಿ ನಾಯಕರಿಗೆ ಎಚ್ಚರಿಕೆ

ಸಾಕಷ್ಟು ವಿರೋಧಗಳು ನಡುಗೆ ಜಾರಿ : 

ಬಿಲ್ಲನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಬೇಕಾಗಿದ್ದರೂ, ವಿಧಾನ ಪರಿಷತ್ತಿನಲ್ಲಿ ಮೊದಲು ಮಂಡಿಸಿ (ಉಲ್ಟಾ) ಸಾಕಷ್ಟು ಚರ್ಚೆಯ ಬಳಿಕ ಅನುಮೋದನೆ ಪಡೆಯಲಾಯಿತು ಎಂದು ರಹಸ್ಯ ತೆರೆದಿಟ್ಟರು.ಎಂಟು ಮುಖ್ಯಮಂತ್ರಿಗಳನ್ನು ದಾಟಿ ಬಂದ ಸಮಸ್ಯೆ ಬಗೆಹರಿಸುವುದು ಸುಲಭ ಆಗಿರಲಿಲ್ಲ. ಸಾಕಷ್ಟು ವಿರೋಧಗಳು ಎದುರಾಗಿತ್ತು. ಇದಕ್ಕೆ ಕಾಫಿ ಬೆಳೆಗಾರರ ಬಗ್ಗೆ ಹಲವರಲ್ಲಿ ಇದ್ದ ನಕಾರಾತ್ಮಕ ಅಭಿಪ್ರಾಯವೂ ಒಂದು ಎಂದರು. ಒಂದೊಮ್ಮೆ ಈ ಬಿಲ್ಲು ಅಂಗೀಕೃತವಾಗದೇ ಇದ್ದಿದ್ದರೆ ತಾನು ಇತ್ತ ತಲೆ ಹಾಕುತ್ತಿರಲಿಲ್ಲ ಎಂದು ಹೇಳಿದ ಸಚಿವರು, ತಾನು ಮಂಡಿಸಿದ ಯಾವುದೇ ಬಿಲ್ಲು ಎಂದಿಗೂ ವಿಫಲವಾಗಿಲ್ಲ ಎಂದು ಬೀಗಿದರು

ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೆ ಸ್ಪಂದಿಸುತ್ತಿದ್ದೇನೆ

ಈ ಹಿಂದೆ ಸಚಿವರುಗಳು ಪ್ರವಾಸಿ ಮಂದಿರಗಳಲ್ಲಿ ಕಾಫಿ ಕುಡಿದು ಅರ್ಜಿಗಳನ್ನ ಪಡೆದುಕೊಂಡು ಹೋಗುತ್ತಿದ್ದರು. ನಾನು ಕಾಫಿ ಕುಡಿಯುವುದರ ಜೊತೆಗೆ ಅವರ ನೋವುಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು. ರೈತರಿಗೆ ಅನುಕೂಲವಾಗಲು ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಳೀಕರಣ ಮಾಡಿ ರೈತರು ಮೊಬೈಲ್‌ನಲ್ಲೇ ದಾಖಲೆ ಪಡೆದುಕೊಳ್ಳುವಂತಹ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿ ಪದನಾಮ ಬದಲಿಸಿ ಗ್ರಾಮ ಆಡಳಿತಾಧಿಕಾರಿ ಎಂದು ಮಾಡಲಾಗಿದೆ. ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ಟ್ಯಾಬ್ ನೀಡಲಾಗುತ್ತಿದ್ದು. ಆ ಮೂಲಕ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

Latest Videos
Follow Us:
Download App:
  • android
  • ios