Asianet Suvarna News Asianet Suvarna News

ಮಡಿಕೇರಿ : ಭುವನಂ ಸಂಸ್ಥೆಯ ಮತ್ತಷ್ಟು ಸೇವಾ ಕಾರ್ಯಗಳಿಗೆ ಚಾಲನೆ

  •  ಕೋವಿಡ್ ಆರಂಭದ ದಿನಗಳಿಂದಲೂ ಸದಾ ನೆರವಾಗುತ್ತಿರುವ ಭುವನಂ ಸಂಸ್ಥೆ
  • ಭುವನಂ ಸಂಸ್ಥೆಯ ಹಲವು ಸೇವಾ ಕಾರ್ಯಗಳಿಗೆ ಇಂದು ಕೊಡಿನಲ್ಲಿ ಚಾಲನೆ 
  • ಚಾಲನೆ ನೀಡಿದ  ಕಂದಾಯ ಸಚಿವ ಆರ್ ಅಶೋಕ್  
Minister R Ashok launches Bhuvanam foundation Social Service Programs in madikeri snr
Author
Bengaluru, First Published Jul 7, 2021, 12:25 PM IST

ಕೊಡಗು (ಜು.07):  ಕೋವಿಡ್ ಆರಂಭದ ದಿನಗಳಿಂದಲೂ ಸದಾ ನೆರವಾಗುತ್ತಿರುವ ಭುವನಂ ಸಂಸ್ಥೆಯ ಹಲವು ಸೇವಾ ಕಾರ್ಯಗಳಿಗೆ ಇಂದು ಕೊಡಿನಲ್ಲಿ ಚಾಲನೆ ನೀಡಲಾಯಿತು.

 ಕಂದಾಯ ಸಚಿವ ಆರ್ ಅಶೋಕ್ ಮಡಿಕೇರಿಯಲ್ಲಿ ಭುವನಂ ಸಂಸ್ಥೆಯ ಹಲವಾರು ಸೇವೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಟ ಭುವನ್ ಪೊನ್ನಣ್ಣ,  ಅಪ್ಪಚ್ಚು ರಂಜನ್, ಕೆಜಿ ಬೋಪಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮುಲ್, ಸತ್ಯ ಗಣಪತಿ ನೇತೃತ್ವದಲ್ಲಿ ಕಾರ್ಯಕ್ರಮ ಆರಂಭಿಸಲಾಯಿತು. 

* ಕೊಡಗು ಲಸಿಕಾ ಅಭಿಯಾನ "ಜೀವ ಬೇಕು ಲಸಿಕೆ ಹಾಕು" ಯೋಜನೆಯ ಅಡಿಯಲ್ಲಿ 25 ಜನರಿಗೆ ಲಸಿಕೆ ಹಾಕಿ ಉಡುಗೊರೆಯನ್ನು ಕೊಡಲಾಯಿತು. ಸಾಂಕೇತಿಕವಾಗಿ ಕೊರೊನಾದ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು.

 ಭುವನಂ ಸಂಸ್ಥೆ ನೆರವು: ಮದುವೆ ಊಟದ ಬದಲು ಬಡವರಿಗೆ ದಿನಸಿ ಕಿಟ್ ವಿತರಿಸಿದ ವಧು, ವ

* "ಶ್ವಾಸ" ಕೊಡಗು ಯೋಜನೆ ಅಡಿಯಲ್ಲಿ 50 ಆಕ್ಸಿಜನ್ ಕಾನ್ಸನ್ ಟ್ರೇಟರ್ ಯಂತ್ರಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಯಿತು.

* "ಬಾಂಧವ" ಆಟೋ ಕೊರೋನ ಜಾಗೃತಿ ಯೋಜನೆಯನ್ನು ಉದ್ಗಾಟಿಸಲಾಯಿತು.

* ಫೀಡ್ ಕರ್ನಾಟಕ ಅಡಿಯಲ್ಲಿ 150 ದಿನಸಿ ಕಿಟ್ ಗಳನ್ನು ಬಡವರಿಗೆ ನೀಡಲಾಯಿತು

 15000 ಕುಟುಂಬಗಳಿಗೆ ನೆರವಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ! .

ಇನ್ನು ಇದೇ ವೇಳೆ ಆರ್. ಅಶೋಕ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಕೇಕ್ ಕತ್ತರಿಸಿ ಆಚರಣೆ ಮಾಡಲಾಯಿತು. ಇನ್ನು ಇದೇ ವೇಳೆ ಜನಸೇವೆಯ ಬಗ್ಗೆ ಹಾಡು ಅನಾವರಣಗೊಳಿಸಲಾಯಿತು.  

ಸರ್ವರು ಭುವನಂ ಸಂಸ್ಥೆಯ ನಿರಂತರ ಸೇವಾ ಕಾರ್ಯಗಳನ್ನು ಮನಃ ಪೂರ್ವಕವಾಗಿ ಅಭಿನಂದಿಸಿದರು. ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಭುವನ್ ಪೊನ್ನಣ್ಣ ಹಾಗೂ ತಂಡದವರಿಗೆ ಹಾರೈಸಿದರು.

Follow Us:
Download App:
  • android
  • ios