ಅಪ್ಪಾರಾವ್ ಸೌದಿ

ಬೀದರ್(ಏ.15):
ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಸೂಚನೆಗಳ ಮೇಲೆ ಸೂಚನೆ ನೀಡುತ್ತಿರುವ ಸರ್ಕಾರದ ಘೋಷಣೆಗಳ ಬೆನ್ನಲ್ಲಿಯೇ ಬೀದರ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಯ 16 ಜನ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿ ಘಟನೆ, ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ವಜಾ ಆದೇಶ ತಡೆದು ಮರು ನೇಮಕಕ್ಕೆ ಸಹಾಯವಾದ ಘಟನೆ ನಡೆದಿದೆ.

ಲಾಕ್‌ಡೌನ್‌ನ ಈ ಸಂದ‘ರ್ದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಕಗೊಳಿಸಿದ್ದ ಗುತ್ತಿಗೆದಾರ ಬ್ರಿಮ್ಸ್ ಆಸ್ಪತ್ರೆಯ 16 ಮಹಿಳಾ ಕಾರ್ಮಿಕರನ್ನು ಕೆಲಸದ ಅಭಾವದ ಹಿನ್ನೆಲೆಯಲ್ಲಿ ತೆಗೆದು ಹಾಕಿದ್ದಾರೆಂದು ಗೋಳು ತೋಡಿಕೊಂಡು ಕಣ್ಣೀರು ಹಾಕುತ್ತ ಸಚಿವ ಪ್ರಭು ಚವ್ಹಾಣ ಅವರ ಬಳಿ ಬಂದಿದ್ದ ಮಹಿಳೆಯರಿಗೆ ‘ಧೈರ್ಯ ಹೇಳಿ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವಂತೆ ಆದೇಶ ನೀಡಿದ್ದಾರೆ.

ಕೊರೋನಾ ವಾರಿಯರ್ಸ್‌ಗೆ ಹೂಮಳೆ ಸುರಿಸಿದ ಬೀದರ್ ಮಂದಿ

ಲಾಕ್‌ಡೌನ್‌ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಭಾರಿ ಸಂಕಷ್ಟ ತಂದೊಡ್ಡಿದೆ ಇದನ್ನರಿತ ಸರ್ಕಾರ ಅಷ್ಟೇ ಅಲ್ಲ ಖುದ್ದು ಪ್ರಧಾನ ಮಂತ್ರಿಗಳು ಅವರ ಜೀವನದ ಬಗ್ಗೆ ಸಹಾನುಭೂತಿ ತೋರಿದ್ದಿದೆ. ಲಾಕ್‌ಡೌನ್‌ ಸಮಯದಲ್ಲಿ ಸಂಬಳ ಕತ್ತರಿಸುವಂತಿ ಕೆಲಸದಿಂದ ತೆಗೆದುಹಾಕುವಂತಿಲ್ಲ ಎಂದು ಸರ್ಕಾರ ಸೂಚಿಸಿದ್ದರೂ ಸರ್ಕಾರದ ಆಸ್ಪತ್ರೆಯಲ್ಲಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದ ಸಚಿವರನ್ನು ಕೆರಳಿಸಿತು.

ಕಣ್ಣೀರು ಹಾಕಿ ಕಾಲಿಗೆ ಬೀಳಲು ಮುಂದಾಗಿದ್ದ ಮಹಿಳಾ ಕಾರ್ಮಿಕರ ಸಂಕಷ್ಟ ಕೇಳಿದ ಸಚಿವ ಪ್ರಭು ಚವ್ಹಾಣ್ ಬ್ರಿಮ್ಸ್ ಆಡಳಿತ ಮಂಡಳಿಯನ್ನ ತರಾಟೆಗೆ ತೆಗೆದುಕೊಂಡರು. ಕಾರ್ಮಿಕರಿಗೆ ಯಾವುದೇ ರೀತಿಯಿಂದ ತೊದರೆಯಾಗಬಾರದು ಎಂದು ಬ್ರಿಮ್ಸ್ ಆಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು 16 ಮಹಿಳಾ ಸಿಬ್ಬಂದಿಯನ್ನ ಮರು ನೇಮಕ ಮಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲು ಆದೇಶಿಸಿದ್ದಾರೆ.