ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಪಾಟೀಲ ಚಾಲನೆ
ನರಗುಂದ ವಿಧಾನಸಭಾ ಮತಕ್ಷೇತ್ರದ ಪಾಪನಾಶಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಗದಗ (ಸೆ.4): ನರಗುಂದ ವಿಧಾನಸಭಾ ಮತಕ್ಷೇತ್ರದ ಪಾಪನಾಶಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಶನಿವಾರ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಪಾಪನಾಶಿ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ . 110.79 ಲಕ್ಷ ಅನುದಾನವನ್ನು ಗ್ರಾಮದ ಅಭಿವೃದ್ಧಿಗಾಗಿ ನೀಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ನರಗುಂದ: ರೈತರ ಜೀವನಾಡಿ ಮಲಪ್ರಭಾ ಡ್ಯಾಂ ಭರ್ತಿಗೆ 5 ಟಿಎಂಸಿ ಬಾಕಿ
ಗ್ರಾಮದ ಎಸ್.ಸಿ. ಕಾಲನಿಯಲ್ಲಿ ಸಿ.ಸಿ. ಚರಂಡಿ ಅಭಿವೃದ್ಧಿಗಾಗಿ . 90.79 ಲಕ್ಷ, ಗ್ರಾಮದ ಬಗಳಾಂಬಿಕಾ ಮಠದ ಜೀರ್ಣೋದ್ಧಾರಕ್ಕಾಗಿ . 5 ಲಕ್ಷ, ಬಾಲಾಜಿ ದೇವಸ್ಥಾನ ಜೀರ್ಣೋದ್ಧಾರಕ್ಕೆ . 10 ಲಕ್ಷ, ಪಾಪನಾಶಿ ತಾಂಡಾದ ಸೇವಾಲಾಲ ದೇವಸ್ಥಾನದ ಮುಂದೆ ಗ್ರೀಲ್ ನಿರ್ಮಿಸಲು . 5 ಲಕ್ಷ ಅನುದಾನವನ್ನು ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕಾಮಗಾರಿಗಳ ಗುಣಮಟ್ಟಕಾಯ್ದುಕೊಳ್ಳುವಂತೆ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವಂತೆ ಕೋರಿದರು.
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ದೇಶ ಭಾರತ. ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಪ್ರಾಮುಖ್ಯತೆ ಕುರಿತು ವಿಶ್ವಕ್ಕೆ ತಿಳಿಸಿಕೊಟ್ಟಿದ್ದಾರೆ. ಗ್ರಾಮದ ಯುವತಿ ಯೋಗಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿರುವದು ಅಭಿನಂದನೀಯ ಎಂದರು. ಗ್ರಾಮದ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ಅಭಿವೃದ್ಧಿ ಕಾಮಗಾರಿಗಳ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸರ್ಕಾರ ಹೆಸರು ಕಾಳು ಖರೀದಿಗಾಗಿ ಬೆಂಬಲ ಬೆಲೆ ಘೋಷಿಸಿ ಖರೀದಿಸಲು ಮುಂದಾಗಿದೆ. ರೈತರು ತಾವು ಬೆಳೆದ ಹೆಸರು ಕಾಳುಗಳನ್ನು ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸುವ ಮೂಲಕ ಮಾರಾಟ ಮಾಡಬೇಕು. ಈ ಕುರಿತು ರೈತರು ಹೆಚ್ಚಿನ ಜಾಗೃತಿ ಹೊಂದುವಂತೆ ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್!
ಈ ಸಂದರ್ಭದಲ್ಲಿ ಅಡವಿ ಸೋಮಾಪುರ ಗ್ರಾಪಂ ಅಧ್ಯಕ್ಷ ಶ್ಯಾಮಸುಂದರ ಡಂಬಳ, ಲಿಂಗದಾಳ ಗ್ರಾಪಂ ಅಧ್ಯಕ್ಷ ಪ್ರದೀಪ, ನಿಂಗಪ್ಪ ಮಣ್ಣೂರ, ಮಹೇಶ ಮಸರಿನಬಾವಿ, ಈಶಪ್ಪ ಇಟಗಿ, ಪ್ರಶಾಂತಗೌಡ ಪಾಟೀಲ, ಸೋಮಣ್ಣ, ಕಮಲವ್ವ ಮಾದರ, ಈಶಪ್ಪ ಇಳಗೇರ, ರವಿ ದಂಡಿನ, ಈಶಪ್ಪ ನಾಯ್ಕರ, ಶಿವಮೂರ್ತಪ್ಪ ಸೇರಿದಂತೆ ಗ್ರಾಮದ ಹಿರಿಯರು ಹಾಜರಿದ್ದರು.