ದಾವಣಗೆರೆ [ಮಾ.07]:  ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆಂದು ಎಚ್‌.ಡಿ.ಕುಮಾರಸ್ವಾಮಿ ಸ್ವಪ್ನ(ಕನಸು) ಕಾಣುತ್ತಿದ್ದಾರೆ. ಕನಸು ಕಾಣಲಿ ಬಿಡಿ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ನಾರಾಯಣ ಗೌಡ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಸ್ವಪ್ನ ಕಾಣಲಿ ಬಿಡಿ ಅಂತಾ ಹೇಳಬಲ್ಲೆ. ಅದಕ್ಕಿಂತ ಹೆಚ್ಚಿನ ಟಿಪ್ಪಣಿ ನಾನು ಮಾಡಲ್ಲ ಎಂದು ಹೇಳಿದರು.

ಹೊನ್ನಾಳಿಯಲ್ಲಿ ಶುಕ್ರವಾರ ಕೃಷಿ ಮೇಳಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ 4ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಂತಹ ಹೆಚ್ಚಿನ ಶಕ್ತಿ, ಜನ ಬೆಂಬಲವೂ ಯಡಿಯೂರಪ್ಪನವರಿಗೆ ಇದೆ ಎಂದರು.

ರೈತರ ಬಗ್ಗೆ ಸಾಕಷ್ಟುಕಾಳಜಿ ಹೊಂದಿರುವ ರೈತ-ಜನ ನಾಯಕ. ಯಾವುದೇ ಮುಖ್ಯಮಂತ್ರಿಗಳು ಟೈಮ್‌ ಮೇನ್ಟೈನ್‌ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಯಾರು ಅಧಿಕಾರಿಗಳಿಗೆ ಸ್ಪಂದಿಸುತ್ತಿದ್ದಾರೆ. ಯಾರು ಸಮಯ ಪಾಲನೆ ಮಾಡುತ್ತಿದ್ದಾರೆ ಎಂಬುದನ್ನು ಮಾಜಿ ಸಿಎಂ ಗಮನಿಸಲಿ ಎಂದು ಹೇಳಿದರು.

ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ.

ಮಾಜಿ ಮುಖ್ಯಮಂತ್ರಿ ಆಗಿರುವವರಿಗೆ ಸಮಯ ಪರಿಪಾಲನೆ ಪ್ರಜ್ಞೆ ಎಷ್ಟಿತ್ತು ಎಂಬುದು ನಿಮಗೂ ಗೊತ್ತಿದೆ. ಆದರೆ, ಯಡಿಯೂರಪ್ಪ ಹೇಳಿದ ಸಮಯಕ್ಕೆ ಬಂದು, ಸಮಯ ಪರಿಪಾಲಿಸುತ್ತಾರೆ. ಬರೀ ಟೀಕೆ, ಟಿಪ್ಪಣಿ ಮಾಡುವುದು ಬೇಡ ಎಂದು ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿಗೆ ಅವರು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಇನ್ನೂ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಯಾರೊಬ್ಬರೂ ಸಿಎಂ ಬಿಎಸ್‌ವೈಗೆ ಟಚ್‌ ಮಾಡುವುದಕ್ಕೂ ಆಗುವುದಿಲ್ಲ. ಅಪಾರ ಅನುಭವಿ ನಾಯಕನಾದ ಯಡಿಯೂರಪ್ಪ ಸರ್ಕಾರವನ್ನು, ರಾಜ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ ಎಂದು ನಾರಾಯಣಗೌಡ ತಿಳಿಸಿದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"