ಭವಿಷ್ಯದಲ್ಲಿ ಆಶೀರ್ವಾದವಿದ್ದರೆ ಮುಖ್ಯಮಂತ್ರಿಯಾಗುವ ಸಾಧ್ಯತೆ: ನಿರಾಣಿ
* ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಬಂದಿರುವುದು ಸಂತೋಷ ತಂದಿದೆ
* ಸಿಎಂ ಕನಸಿನ ಮಾತುಗಳನ್ನು ವ್ಯಕ್ತಪಡಿಸಿದ ನಿರಾಣಿ
* ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ
ಬಾಗಲಕೋಟೆ(ಆ.08): ಭವಿಷ್ಯದಲ್ಲಿ ನಮ್ಮ ಪಕ್ಷದ ಹಿರಿಯರ, ಪರಿವಾರದವರ ಆಶೀರ್ವಾದವಿದ್ದರೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಸಚಿವ ಮುರುಗೇಶ ನಿರಾಣಿ ಮತ್ತೆ ಮುಖ್ಯಮಂತ್ರಿ ಕನಸಿನ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೆರಕಲಮಟ್ಟಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಪೈಪೋಟಿಯಲ್ಲಿ ಕೊನೆಯವರೆಗೂ ನನ್ನ ಹೆಸರು ಬಂದು ನಿಂತಿದ್ದು ಸಂತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ: ಮುರುಗೇಶ ನಿರಾಣಿ
ಬೀಳಗಿ ತಾಲೂಕಿನ ನನ್ನ ಹುಟ್ಟೂರಾದ ಚಿಕ್ಕಬಸವನಾಳ ಗ್ರಾಮದಿಂದ ಹಿಡಿದು ಬೆಂಗಳೂರು, ದೆಹಲಿಯವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಬಂದಿರುವುದು ಸಂತೋಷ ತಂದಿದೆ. ಈ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ. ಇದಕ್ಕೆ ಕಾರಣೀಭೂತರಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.