Chikkaballapur: ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು: ಎಂಟಿಬಿ ನಾಗರಾಜ್

ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಬಿರುಗಾಳಿ ಸಹಿತದ ಮಳೆಯಿಂದಾಗಿ 207 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು 95 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

minister mtb nagaraj visits chikkaballapur flood affected areas gvd

ವರದಿ: ರವಿಕುಮಾರ್ ವಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮೇ.23): ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಬಿರುಗಾಳಿ ಸಹಿತದ ಮಳೆಯಿಂದಾಗಿ 207 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು 95 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ಬೆಳೆ ಹಾನಿಗೊಳಗಾದ ರೈತರಿಗೆ ನಿಯಮಗಳ ಅನ್ವಯ ಸರ್ಕಾರ ಪರಿಹಾರ ನೀಡಲಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ,ಅಜ್ಜವಾರ ಹಂಡಿಗಾನಾಳ, ವರದಹಳ್ಳಿ ಸೇರಿದಂತೆ ವಿವಿಧ  ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿ ರೈತರಿಗೆ ಪರಿಹಾರ ‌ಕೊಡಿಸುವುದಾಗಿ ಭರವಸೆ ನೀಡಿದರು.

ಬೆಳೆ ವಿಮೆ ಮಾಡಿಸಲು ಸಚಿವರು ಮನವಿ: ಕೃಷಿ, ತೋಟಗಾರಿಕೆ ಸೇರಿದಂತೆ ಯಾವುದೇ ಬೆಳೆ ಬೆಳೆಯುವ ರೈತರು ಹವಾಮಾನ ವೈಪರೀತ್ಯಗಳಿಂದ ಆಗುವ ಬೆಳೆಹಾನಿ ನಷ್ಟದಿಂದ ಪಾರಾಗಲು ಮುನ್ನೆಚ್ಚರಿಕೆಯಿಂದ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಇತ್ತೀಚಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಸುರಿದ ಬಿರುಗಾಳಿ ಸಹಿತದ ಮಳೆಯಿಂದಾಗಿ ದ್ರಾಕ್ಷಿ, ಟೊಮ್ಯಾಟೊ ಮತ್ತು ಮಾವು ಬೆಳೆಗಳು ನೆಲಕಚ್ಚಿವೆ. ಬೆಳೆ ನಷ್ಟಕ್ಕೆ ಒಳಗಾದ ರೈತರು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸಂಕಷ್ಟಕ್ಕೆ ಸಿಲುಕಿದ ರೈತರ ಜೊತೆಗೆ ಸರ್ಕಾರವಿದೆ. 

ತಡರಾತ್ರಿ ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಬೆದರಿದ ಜನ, ಭೂಕಂಪವಲ್ಲ!

ನಿಯಮಗಳನ್ವಯ ಸರ್ಕಾರ‌ ಆದಷ್ಟು ಶೀಘ್ರ ಪರಿಹಾರ ನೀಡಲಿದೆ. ಸರ್ಕಾರ ನೀಡುವ ಪರಿಹಾರದ ಜೊತೆಗೆ ಕೇಂದ್ರದ ಮನ್ರೇಗಾ ಯೋಜನೆಯಡಿಯೂ ಬೆಳೆ ನಷ್ಟ ಪರಿಹಾರಕ್ಕೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮನ್ರೇಗಾದಡಿಯೂ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್ ಬ್ಯಾಂಕ್‌ಗಳಲ್ಲಿ ಶೇ 0.7 ರಷ್ಟು ಬಡ್ಡಿದರದಲ್ಲಿ ಬೆಳೆ ಸಾಲವನ್ನು ನೀಡಲಾಗುತ್ತಿದೆ. ರೈತರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಸರ್ಕಾರ ಹಾಗೂ ಜಿಲ್ಲಾಡಳಿತ ನಿಮ್ಮೊಂದಿಗೆ ಇರುತ್ತದೆ ಎಂದರು.

ಚಿಕ್ಕಬಳ್ಳಾಪುರದ ಮೆಗಾ ಆರೋಗ್ಯ ಮೇಳ ವಿಶ್ವ ದಾಖಲೆಯಾಗಲಿದೆ: ಸಚಿವ ಡಾ.ಕೆ.ಸುಧಾಕರ್

ವೈಯಕ್ತಿಕ 50 ಸಾವಿರ ಸಹಾಯ ನೀಡಿದ ಎಂಟಿಬಿ: ದ್ರಾಕ್ಷಿ ತೋಟ ಸಂಪೂರ್ಣ ನೆಲಕಚ್ಚಿದ ಹಿನ್ನೆಲೆಯಲ್ಲಿ ಅರಸನಹಳ್ಳಿ ರೈತ ನಂಜೇಗೌಡ ಅವರಿಗೆ ಐವತ್ತು ಸಾವಿರ ವೈಯಕ್ತಿಕ ಪರಿಹಾರ ವಿತರಿಸಿದರು. ಅಲ್ಲದೇ ಕೂಡಲೇ ಸರ್ಕಾರದಿಂದಲೂ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಂಟಿ  ಕೃಷಿ  ನಿರ್ದೇಶಕಿ  ರೂಪಾ, ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ತೋಟಗಾರಿಕೆ  ಇಲಾಖೆಯ  ಉಪನಿರ್ದೇಶಕ ರಮೇಶ್  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios