ರಾಜ್ಯದಲ್ಲಿ ಸುಸ್ಥಿರ ಆಡಳಿತ ನಿಶ್ಚಿತ: ಸಚಿವ ಎಂಟಿಬಿ ನಾಗರಾಜ್‌

ಕಾರ್ಯಕರ್ತರಿಂದ ಅಭಿನಂದನೆ ಸ್ವೀಕಾರ: ಅಭಿಮಾನಿಯಿಂದ ಎಂಟಿಬಿಗೆ ಟಗರು ಕೊಡುಗೆ| ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದರೂ ನನ್ನ ಇಲಾಖೆಯಲ್ಲಿ ಬಡವರಿಗೆ ಅಗತ್ಯ ಯೋಜನೆ ತಲುಪಿಸಲು ನನಗೆ ಸ್ವತಂತ್ರ ಇರಲಿಲ್ಲ| ಎಚ್‌ಡಿ ಕುಮಾರಸ್ವಾಮಿ ನನ್ನ ಖಾತೆಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಮಾಡದೆ ವಿಳಂಬ ನೀತಿ ಅನುಸರಿಸಿದ್ದರು| 

Minister MTB Nagaraj Talks Over BJP Government grg

ಹೊಸಕೋಟೆ(ಜ.18): ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಅವಧಿಯ ಅಧಿಕಾರವನ್ನು ಯಶಸ್ವಿಯಾಗಿ ನಡೆಸಲಿದ್ದು, ಸುಸ್ಥಿರ ಆಡಳಿತ ನೀಡುವುದು ನಿಶ್ಚಿತ ಎಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದ್ದಾರೆ. 

ತಾಲೂಕಿನ ಅನುಗೊಂಡಹಳ್ಳಿ ಹೋಬಳಿ ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದರೂ ನನ್ನ ಇಲಾಖೆಯಲ್ಲಿ ಬಡವರಿಗೆ ಅಗತ್ಯ ಯೋಜನೆ ತಲುಪಿಸಲು ನನಗೆ ಸ್ವತಂತ್ರ ಇರಲಿಲ್ಲ. ಎಚ್‌ಡಿ ಕುಮಾರಸ್ವಾಮಿ ಅವರು ನನ್ನ ಖಾತೆಗೆ ಸಂಬಂಧಿಸಿದಂತೆ ಅಗತ್ಯ ಅನುದಾನ ಮಾಡದೆ ವಿಳಂಬ ನೀತಿ ಅನುಸರಿಸಿದ್ದರು. ಪರಿಣಾಮವಾಗಿ ಕುರ್ಚಿಗೆ ಹೊಂದಿಕೊಳ್ಳದೆ ರಾಜೀನಾಮೆ ನೀಡಿ, ಸುಸ್ಥಿರ ಸರ್ಕಾರ ತರಲು ಮುಂದಾಗಿದ್ದೆ. ಆದರೂ ಕ್ಷೇತ್ರದ ಮತದಾರರು ನನ್ನ ಅಭಿವೃದ್ಧಿ ಕಾರ್ಯವನ್ನು ಮರೆತು ನನ್ನ ಸೋಲಿಗೆ ಕಾರಣರಾದರು. ಇದರ ಬಗ್ಗೆ ನನಗೆ ಸಾಕಷ್ಟುನೋವಿದೆ. ಆದರೂ ಬಿಎಸ್‌ವೈ ಅವರು ಎಂಎಲ್‌ಸಿ ಮಾಡಿ, ಸಚಿವನನ್ನಾಗಿ ಮಾಡಿದ್ದು, ಜನರ ಸೇವೆ ಮಾಡಲು ಅನುಕೂಲ ಕಲ್ಪಿಸಿದ್ದಾರೆ. ಅವರು ಯಾವುದೇ ಖಾತೆ ಕೊಟ್ಟರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತೇನೆ ಎಂದರು.

ಬಿಎಂಆರ್‌ಡಿಎ ಸದಸ್ಯ ಸಿದ್ದನಪುರ ಸಂತೋಷ್‌ ಮಾತನಾಡಿ, ಎಂಟಿಬಿ ನಾಗರಾಜ್‌ ಅವರ ಸೋಲಿನಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ಷೀಣಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಅವರು ಕಂಡಿದ್ದ ಕನಸು ನನಸಾಗಿಯೆ ಉಳಿದಿದೆ. ಶಾಶ್ವತ ನೀರಾವರಿ ಯೋಜನೆ, ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ಯೋಜನೆ ಸೇರಿದಂತೆ ಹಲವಾರು ಕಾರ್ಯಗಳಿಗೆ ಈಗ ಮರುಜೀವ ಬಂದಂತಾಗಿದೆ. ಆದ್ದರಿಂದ ಇವೆಲ್ಲವನ್ನು ಅರಿತು ಮತದಾರರು ಮುಂಬವರು ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕು. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ವೇಗ ದಕ್ಕುತ್ತದೆ ಎಂದರು.

ಬ್ಲಾಕ್‌ಮೇಲ್‌ ಮಾಡಿ ಸಚಿ​ವ​ನಾಗುವ ರಾಜಕಾರಣಿ ನಾನಲ್ಲ: ಎಂಟಿಬಿ

ಅನುಗೊಂಡಹಳ್ಳಿ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಓಬಳಾಪುರ ಮಂಜು, ವಿಎಸ್‌ಎಸ್‌ಎನ್‌ ನಿರ್ದೇಶಕ ರಘು, ಗಣಗಲೂರು ಗ್ರಾಪಂ ಸದಸ್ಯ ಮೀನುಸಾಬಿ, ಮಾಜಿ ಗ್ರಾಪಂ ಸದಸ್ಯ ಮಾರನಗೆರೆ ಮುನಿಕೃಷ್ಣ (ಕಿಟ್ಟಿ), ಮುಖಂಡರಾದ ಗುಂಡೂರು ಸೀನಪ್ಪ, ಬಾಗೂರು ಶಿವಪ್ಪ, ಗಣಗಲೂರು ಗ್ರಾಪಂ ವ್ಯಾಪ್ತಿಯ ಎಲ್ಲ ಮುಖಂಡರು ಹಾಜರಿದ್ದರು.

ಅನುಗೊಂಡಹಳ್ಳಿ ಹೋಬಳಿಯ ಏತ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದ್ದು, ಬಿಜೆಪಿ ಸರ್ಕಾರದ ಅವದಿಯಲ್ಲಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಅನುವುಮಾಡಿಕೊಡಬೇಕು. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌- ಸ್ವಾಭಿಮಾನಿ ಪಕ್ಷ ಹೊಂದಾಣಿಕೆಯಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಆದರೂ ಅನುಗೊಂಡಹಳ್ಳಿ ಹೋಬಳಿಯಲ್ಲಿ ಸಾಕಷ್ಟುಪೈಪೋಟಿ ನೀಡಿ ಶೇ.50ರಷ್ಟುಸ್ಥಾನಗಳನ್ನು ಪಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಎಂಟಿಬಿ ನಾಗರಾಜ್‌ ಅವರ ಕೈ ಬಲಪಡಿಸುವ ಮೂಲಕ ಬಿಜೆಪಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಅನುಗೊಂಡಹಳ್ಳಿ ಶಕ್ತಿಕೇಂದ್ರದ ಅಧ್ಯಕ್ಷ ಓಬಳಾಪುರ ಮಂಜು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios