ಕಾರವಾರ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಂಕಾಳು ವೈದ್ಯ
ಅಂಗನವಾಡಿ, ಶಾಲೆ, ವಿದ್ಯುತ್, ನೀರು ಪೂರೈಕೆ ನನ್ನ ಮೊದಲ ಆದ್ಯತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜನರಿಗೆ ಯಾವುದೇ ತೊಂದರೆಗಳು ಆಗಬಾರದು. ಹಾಗೇನಾದರೂ ಆದಲ್ಲಿ ಅಂತಹವರಿಗೆ ನನ್ನ ಜಿಲ್ಲೆಯಲ್ಲಿ ಜಾಗ ಇಲ್ಲ ಎಂದು ಎಚ್ಚರಿಸಿದ ಸಚಿವ ಮಂಕಾಳು ವೈದ್ಯ
ಉತ್ತರಕನ್ನಡ(ಜೂ.08): ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕಾರವಾರಕ್ಕೆ ಆಗಮಿಸಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ ಸಚಿವ ವೈದ್ಯ, ಮಳೆಗಾಲದ ಸಿದ್ಧತೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಈ ವೇಳೆ ಮಾಹಿತಿ ನೀಡುವಲ್ಲಿ ತಡವರಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ಮನಸ್ಸಿನಿಂದ ಕೆಲಸ ಮಾಡುವುದಿದ್ದರೆ ಜಿಲ್ಲೆಯಲ್ಲಿರಿ, ಇಲ್ಲವಾದಲ್ಲಿ ವರ್ಗಾವಣೆ ತೆಗೆದುಕೊಂಡು ಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದ್ರು.
ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್ ಶೆಟ್ಟಿ: ಕುಣಬಿ ಜನರ ಜತೆ ಭಾಷಾಭ್ಯಾಸ
ನನಗೆ ಜಿಲ್ಲೆಯಲ್ಲಿ ಬಡವರ ಕೆಲಸಗಳು ಸರಿಯಾಗಿ ಆಗಬೇಕು. ಅವರ ಕೆಲಸವನ್ನು ಸರಿಯಾಗಿ ಮಾಡಿಕೊಡುವುದಿದ್ದಲ್ಲಿ ಮಾತ್ರ ಜಿಲ್ಲೆಯಲ್ಲಿರಿ ಎಂದು ಸೂಚನೆ ನೀಡಿದ್ರು. ಅಂಗನವಾಡಿ, ಶಾಲೆ, ವಿದ್ಯುತ್, ನೀರು ಪೂರೈಕೆ ನನ್ನ ಮೊದಲ ಆದ್ಯತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜನರಿಗೆ ಯಾವುದೇ ತೊಂದರೆಗಳು ಆಗಬಾರದು. ಹಾಗೇನಾದರೂ ಆದಲ್ಲಿ ಅಂತಹವರಿಗೆ ನನ್ನ ಜಿಲ್ಲೆಯಲ್ಲಿ ಜಾಗ ಇಲ್ಲ ಎಂದು ಎಚ್ಚರಿಸಿದ್ರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಕೆಲವೊಂದು ಅಗತ್ಯ ಸಲಹೆ, ಸೂಚನೆಗೆಳನ್ನ ನೀಡಿದ್ದಾರೆ.