ತುಮಕೂರು (ಆ.14): ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟಉಂಟಾದರೆ ಆ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಕಾನೂನಾಗಿದ್ದು ರಾಜ್ಯದಲ್ಲಿ ಜಾರಿಯಾಗಬೇಕು ಅಷ್ಟೆಎಂದು ಜಿಲ್ಲಾ ಉಸ್ತು​ವಾರಿ ಸಚಿವ ಜೆ.ಸಿ.ಮಾಧು​ಸ್ವಾಮಿ ಅಭಿ​ಪ್ರಾ​ಯ​ಪ​ಟ್ಟ​ರು.

ಅವರು ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ನಮಗೆ ಈವರೆಗೂ ಅಂಥಾ ಪರಿಸ್ಥಿತಿ ನಿರ್ಮಾಣ ಆಗಿರಲಿಲ್ಲ. ಈ ಹಿಂದೆ ನಡೆ​ದಿದ್ದ ಘಟನೆಗಳಲ್ಲಿ ಜಾರಿ ಮಾಡಿರಲಿಲ್ಲ. ಜಾರಿ ಕುರಿತು ಸರ್ಕಾರ ತೀರ್ಮಾನ ತಗೋಬೇಕು ಎಂದರು.

ಬೆಂಗಳೂರು ಗಲಭೆ ಮ್ಯಾಜಿಸ್ಟ್ರೇಟ್ ತನಿಖೆಗೆ, ಗಲಭೆಕೋರರಿಂದಲೇ ನಷ್ಟ ವಸೂಲಿ.

ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಕಾನೂನಾಗಿದೆ. ಮುಖ್ಯ​ಮಂತ್ರಿ​ಗಳು ಕ್ವಾರಂಟೈ​ನ್‌​ನ​ಲ್ಲಿದ್ದಾರೆ. ಅವರು ಬಂದು ಕೂತು ಸಭೆ ಮಾಡಿ ನಿರ್ಧಾರ ತೆಗೆ​ದು​ಕೊ​ಳ್ಳು​ತ್ತಾರೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಬ್ಯಾನ್‌ ವಿಚಾರಕ್ಕೆ ಸಂಬಂಧಿ​ಸಿ​ದಂತೆ ಕಾನೂನಿನ ಕ್ರಮ ಏನಿದ್ಯೋ ಅದನ್ನು ಖಂಡಿತ ಜಾರಿ ಮಾಡು​ವು​ದಾಗಿ ತಿಳಿ​ಸಿ​ದರು.

ಮೂರು ಸಾವಿರ ಜನ ಸೇರುತ್ತಾರೆ ಅಂದರೆ ಪ್ರಚೋದನೆ ಇಲ್ಲದೆ, ಪ್ಲಾನ್‌ ಇಲ್ಲದೆ, ಆರ್ಗನೈಸೇಶನ್‌ ಇಲ್ಲದೆ ಮಾಡುವು​ದ​ಕ್ಕಾ​ಗೋಲ್ಲ ಎಂದರು.